Bangalore, ಏಪ್ರಿಲ್ 22 -- ಕನ್ನಡ ಕಿರುತೆರೆಯ ಖ್ಯಾತ ಆ್ಯಂಕರ್ ಅನುಶ್ರೀ ಅವರ ಮದುವೆ ಕುರಿತು ಎಲ್ಲರಿಗೂ ಕುತೂಹಲ. ಮಂಗಳೂರು ಬೆಡಗಿಗೆ ಯಾವಾಗ ಮದುವೆ ಎಂದು ಕೇಳುತ್ತಿರುತ್ತಾರೆ. ಈ ವರ್ಷ ಖಂಡಿತಾ ಮದುವೆಯಾಗ್ತಿನಿ ಎಂದು ಇತ್ತೀಚೆಗೆ ಅನುಶ್ರೀ ಅವರು ಖಚಿತಪಡಿಸಿದ್ದಾರೆ.

ಇದೀಗ ನಟಿ ಮತ್ತು ಆ್ಯಂಕರ್ ಅನುಶ್ರೀ ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳಿಗೆ ಸಾಗರದಾಚೆಗಿನ ಸಾಗರಿ ಎಂಬ ಕ್ಯಾಪ್ಷನ್‌ ನೀಡಿದ್ದಾರೆ. ಹಿನ್ನೆಲೆಯಲ್ಲಿ ನಿನ್ನ ಸನಿಹ ಚಂದ, ನಿನ್ನ ಸ್ಪರ್ಶ ಚಂದ ಎಂಬ ಹಾಡು ಕೇಳಿಸುತ್ತದೆ.

ಅನುಶ್ರೀ ಅವರು ತನ್ನ ಫೋಟೋಗಳ ಹಿನ್ನೆಲೆಗೆ ಬಳಸಿರುವುದು ಸಾಗರಿಯೇ ಸಾಗರಿಯೇ ಎಂಬ ಹಾಡನ್ನು. ಇದು ಗಲಾಟೆ ಅಳಿಯಂದಿರು ಸಿನಿಮಾದ ಹಾಡು. ಇದೇ ಹಾಡನ್ನು ಹಿನ್ನೆಲೆಯಾಗಿ ಬಳಸಿಕೊಂಡು ಸದ್ಯದಲ್ಲಿಯೇ ಮದುವೆಯಾಗುವ ಹಿಂಟ್‌ ನೀಡಿದ್ರ?

ಸೆಲೆಬ್ರಿಟಿಗಳ ಮದುವೆ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಗಾಸಿಪ್‌ ಇರುವುದು ಸಹಜ. ಕನ್ನಡದ ಸುಂದರ ನಿರೂಪಕಿ ಅನುಶ್ರೀ ಮದುವೆ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಥ...