ಭಾರತ, ಮಾರ್ಚ್ 5 -- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಪಾತ್ರದಲ್ಲಿ ಅಭಿನಯಿಸುತ್ತಿರುವ ಸುಷ್ಮಾ ನಾಣಯ್ಯ ತಮ್ಮ ನಿಜ ಜೀವನದಲ್ಲಿ ಹೇಗಿರುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮಗೂ ಇರಬಹುದು. ಸಾಕಷ್ಟು ಜನರು ಅವರ ಉಡುಗೆ, ತೊಡುಗೆ ಹಾಗೂ ಧಾರಾವಾಹಿಯಲ್ಲಿ ಅವರು ಕಾಣಿಸಿಕೊಳ್ಳುವ ರೀತಿಯನ್ನು ಇಷ್ಟಪಡುತ್ತಾರೆ. ಸಾಕಷ್ಟು ಜನ ಕಾಮೆಂಟ್‌ ಮೂಲಕ ಕಾವೇರಿ ಬಾಹ್ಯ ಸೌಂದರ್ಯವನ್ನು ಹೊಗಳಿದ್ದಾರೆ. ಧಾರಾವಾಹಿಯಲ್ಲಿ ನೆಗಟಿವ್ ಪಾತ್ರ ಮಾಡುತ್ತಿರುವ ಕಾರಣ ಅವರ ಸ್ವಭಾವದ ಬಗ್ಗೆ ಹೇಳದೇ ಇದ್ದರೂ ಸಹ ಅವರ ಫ್ಯಾಷನ್‌ ಸೆನ್ಸ್‌ ಬಗ್ಗೆ ಸಾಕಷ್ಟು ಜನ ಕುತೂಹಲ ಹೊಂದಿದ್ದಾರೆ.

ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಾವೇರಿ ತಮ್ಮ ಫ್ಯಾಷನ್‌ ಹಾಗೂ ತಮ್ಮ ಲುಕ್‌ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಕಾವೇರಿ ಕಿರುತೆರೆಯಲ್ಲಿ ಕಾಣಿಸಿದ ತಕ್ಷಣ ಅವಳು ತೊಟ್ಟ ಸೀರೆ ಯಾವುದು? ಅವಳ ಆಭರಣ ಹೇಗಿದೆ? ಇದನ್ನೆಲ್ಲ ಗ್ರಹಿಕೆ ಮಾಡುವವರು ಸಾಕಷ್ಟು ಜನರಿದ್ದಾರೆ. ತನಗೂ ಮೆಸೆಜ್ ಮಾಡಿ ನೀವು ಎಲ್ಲಿಂದ ಇವನ್ನೆಲ್ಲ ...