ಭಾರತ, ಏಪ್ರಿಲ್ 4 -- Lakshmi Baramma Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಅಂತಿಮ ಹಂತದಲ್ಲಿದೆ. ಗುರುವಾರ ಪ್ರಸಾರವಾದ 599ನೇ ಸಂಚಿಕೆಯ ಕಥೆ ಇಲ್ಲಿದೆ. ಊರ ಹೊರಗಿನ ಶೆಡ್‌ ಒಂದರಲ್ಲಿ ಲಕ್ಷ್ಮೀಯನ್ನು ಕಿಡ್ನಾಪ್‌ ಮಾಡಿ ಚಿಂಗಾರಿ ಕೂಡಿಹಾಕುತ್ತಾಳೆ. ಕೀರ್ತಿ, ಅವಳನ್ನೇ ಫಾಲೋ ಮಾಡಿಕೊಂಡು ಬಂದು ಲಕ್ಷ್ಮೀಯನ್ನು ಬಿಡಿಸುತ್ತಾಳೆ. ಅಷ್ಟರಲ್ಲಿ ಚಿಂಗಾರಿ ದೊಣ್ಣೆಯಿಂದ ಕೀರ್ತಿಗೆ ಹೊಡೆಯುತ್ತಾಳೆ. ಇದರಿಂದ ಅವಳು ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿ ಬೀಳುತ್ತಾಳೆ.

ಚಿಂಗಾರಿಯನ್ನು ಹೊಡೆದು ಕೀರ್ತಿ ತನ್ನನ್ನು ಕಾಪಾಡಲು ಬಂದ ಕೀರ್ತಿಯನ್ನು ಒಂದು ತಳ್ಳುಗಾಡಿಯ ಮೇಲೆ ಮಲಗಿಸಿಕೊಂಡು ಆಸ್ಪತ್ರೆಯನ್ನು ಹುಡುಕಿ ಹೊರಡುತ್ತಾಳೆ. ಬಹಳ ದೂರ ಹೋದ ನಂತರ ರಸ್ತೆಯಲ್ಲಿ ಸಿಕ್ಕ ವ್ಯಕ್ತಿಯೊಬ್ಬರನ್ನು ಲಕ್ಷ್ಮೀ ಸಹಾಯ ಕೇಳುತ್ತಾಳೆ. ಇಲ್ಲಿ ಯಾವ ಆಸ್ಪತ್ರೆಯೂ ಇಲ್ಲ. ಊರಿನಿಂದ ನೀನು ಬಹಳ ದೂರ ಇದ್ದೀಯ, ಹತ್ತಿರದ ಆಸ್ಪತ್ರೆ ಎಂದರೆ ನೀನು ಇನ್ನೂ 10 ಕಿ.ಮೀ ದೂರ ಹೋಗಬೇಕು, ಅಷ್ಟರಲ್ಲಿ ಈ ಹುಡುಗಿ ಬ...