ಭಾರತ, ಏಪ್ರಿಲ್ 2 -- ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಅಂತಿಮ ಹಂತದಲ್ಲಿದೆ. ಮಂಗಳವಾರ ಪ್ರಸಾರವಾದ 597ನೇ ಸಂಚಿಕೆಯ ಕಥೆ ಇಲ್ಲಿದೆ. ಕಾವೇರಿಗೆ ನಿದ್ರೆ ಮಾತ್ರೆ ಕೊಟ್ಟು ಅವಳು ಹೇಳುವ ಕೊಲೆ ವಿಚಾರವನ್ನು ಚಿಂಗಾರಿ, ತನ್ನ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಳ್ಳುತ್ತಾಳೆ. ವೈಷ್ಣವ್‌ ಎಂಗೇಜ್‌ಮೆಂಟ್‌ ಮುಗಿಯುವವರೆಗೂ ಲಕ್ಷ್ಮೀ ಯಾರಿಗೂ ಕಾಣಿಸಿಕೊಳ್ಳಬಾರದು ಎಂದು ಕಾವೇರಿ ಹೇಳಿದ ಮಾತನ್ನು ಪಾಲಿಸಿದ ಚಿಂಗಾರಿ, ಅವಳನ್ನು ಕಿಡ್ನಾಪ್‌ ಮಾಡುತ್ತಾಳೆ. ಈ ವಿಚಾರವನ್ನು ಕಾವೇರಿಗೆ ಹೇಳುತ್ತಾಳೆ.

ಲಕ್ಷ್ಮೀ ಕಿಡ್ನಾಪ್‌ ಆದ ವಿಚಾರ ಕೇಳಿ ಕಾವೇರಿ ಖುಷಿಯಾದರೂ, ಒಂದು ವೇಳೆ ಅವಳು ತಪ್ಪಿಸಿಕೊಂಡು ಬಂದರೆ ಅಪಾಯ ಎಂದು ತಿಳಿದು ಅವಳನ್ನು ಕಾಯಲು ಚಿಂಗಾರಿಯನ್ನೇ ಕಳಿಸುತ್ತಾಳೆ. ನಾನು ನಾನಾಗಿಯೇ ಹೋದರೆ ಲಕ್ಷ್ಮೀಗೆ ನನ್ನ ಬಗ್ಗೆ ಗೊತ್ತಾಗುತ್ತದೆ ಎಂದು, ಚಿಂಗಾರಿ ಪುರುಷನಂತೆ ಗಡ್ಡ, ಮೀಸೆ ಅಂಟಿಸಿಕೊಂಡು ಅವಳ ಬಳಿ ಹೋಗುತ್ತಾಳೆ. ಲಕ್ಷ್ಮೀಯನ್ನು ಕಾಯಲು ಬಿಟ್ಟಿದ್ದ ಇಬ್ಬರು ರೌಡಿಗಳು ಚಿಂಗಾರಿಯನ್...