ಭಾರತ, ಏಪ್ರಿಲ್ 1 -- ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಕಥೆ ಅಂತಿಮ ಹಂತದಲ್ಲಿದೆ. ತನ್ನ ವಿರುದ್ಧ ಸಂಚು ಮಾಡಿದ ಲಕ್ಷ್ಮೀಯನ್ನು ಹೇಗಾದರೂ ಮಾಡಿ ಮನೆಯಿಂದ ಹೊರ ಕಳಿಸಬೇಕು, ಮಗ ವೈಷ್ಣವ್‌ಗೆ ಮತ್ತೊಂದು ಮದುವೆ ಮಾಡಬೇಕು ಎಂದು ಕಾವೇರಿ ಪ್ಲ್ಯಾನ್‌ ಮಾಡುತ್ತಿದ್ದಾಳೆ. ತನ್ನ ಪ್ಲ್ಯಾನ್‌ ಯಶಸ್ವಿಯಾಗಲು ಚಿಂಗಾರಿಯನ್ನು ಬಳಸಿಕೊಂಡಿದ್ದಾಳೆ. ವೈಷ್ಣವ್‌ ಕೂಡಾ ಅಮ್ಮ ಹೇಳಿದ್ದೇ ವೇದವಾಕ್ಯ ಎಂದು, ಮತ್ತೊಂದು ಮದುವೆ ಆಗಲು ಒಪ್ಪಿಕೊಳ್ಳುತ್ತಾನೆ. ಆದರೆ ಸೋಮವಾರದ ಎಪಿಸೋಡ್‌ನಲ್ಲಿ ಧಾರಾವಾಹಿ ಕಥೆಗೆ ಟ್ವಿಸ್ಟ್‌ ಸಿಕ್ಕಿದೆ.

ಕಾವೇರಿಗೆ ಬ್ಲಾಕ್‌ಮೇಲ್‌ ಮಾಡಲು, ಮನೆ ಕೆಲಸದವಳಂತೆ ನಾಟಕ ಮಾಡುತ್ತಿರುವ ಚಿಂಗಾರಿ ಒಂದು ಮಾಸ್ಟರ್‌ ಪ್ಲ್ಯಾನ್‌ ಮಾಡುತ್ತಾಳೆ. ಹಾಲಿಗೆ ನಿದ್ರೆ ಮಾತ್ರೆ ಬೆರೆಸಿ, ಅದರ ಜೊತೆ ಡ್ರೈ ಫ್ರೂಟ್ಸ್‌ ತಂದು ಕಾವೇರಿಗೆ ಕೊಡುತ್ತಾಳೆ. ವೈಷ್ಣವ್‌ ಎಂಗೇಜ್‌ಮೆಂಟ್‌ ಮುಗಿಯುವವರೆಗೂ ಲಕ್ಷ್ಮೀಗೆ ಯಾವ ವಿಚಾರ ಕೂಡಾ ಗೊತ್ತಾಗಬಾರದು, ಅವಳು ನನ್ನ ಪುಟ್ಟನಿಂದ ದೂರ ಇರುವಂತೆ ನೋಡಿಕೋ...