ಭಾರತ, ಏಪ್ರಿಲ್ 3 -- ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಅಂತಿಮ ಹಂತದಲ್ಲಿದೆ. ಬುಧವಾರ ಪ್ರಸಾರವಾದ 598ನೇ ಸಂಚಿಕೆಯ ಕಥೆ ಇಲ್ಲಿದೆ. ವೈಷ್ಣವ್‌ ಎಂಗೇಜ್‌ಮೆಂಟ್‌ಗೆ ಲಕ್ಷ್ಮೀಯಿಂದ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಕಾವೇರಿ ಅವಳನ್ನು ಕಿಡ್ನಾಪ್‌ ಮಾಡುವಂತೆ ಚಿಂಗಾರಿಗೆ ಸೂಚಿಸುತ್ತಾಳೆ. ಲಕ್ಷ್ಮೀ ಹಾಗೂ ಚಿಂಗಾರಿ ಇಬ್ಬರೂ ಮಾತನಾಡುವುದನ್ನು ಕೇಳಿಸಿಕೊಂಡ ಕೀರ್ತಿ, ನನ್ನ ಲಚ್ಚಿಗೆ ಏನೂ ಸಮಸ್ಯೆಯಾಗಿದೆ, ಅವಳನ್ನು ಕಾಪಾಡಬೇಕು ಎಂದು ಚಿಂಗಾರಿಯನ್ನು ಫಾಲೋ ಮಾಡುತ್ತಾಳೆ. ಲಕ್ಷ್ಮೀಯನ್ನು ಕೂಡಿಹಾಕಿದ್ದ ಸ್ಥಳ ನೋಡಿ ಅವಳಿಗೆ ಮೊದಲು ಒಮ್ಮೆ ಈ ಸ್ಥಳಕ್ಕೆ ಬಂದ ನೆನಪಾಗುತ್ತದೆ.

ರೌಡಿಗಳನ್ನು ದೊಣ್ಣೆಯಿಂದ ಹೊಡೆಯುವ ಕೀರ್ತಿ ಮೆಲ್ಲಗೆ ಲಕ್ಷ್ಮೀ ಬಳಿ ಬರುತ್ತಾಳೆ. ಅವಳನ್ನು ನೋಡಿ ಲಕ್ಷ್ಮೀಗೆ ಖುಷಿ ಜೊತೆ ಆಶ್ವರ್ಯವಾಗುತ್ತದೆ. ಅವರಿಬ್ಬರೂ ಮಾತನಾಡುತ್ತಿದ್ದನ್ನು ಕೇಳಿಸಿಕೊಂಡು ಇಲ್ಲಿಗೆ ಬಂದಿದ್ದಾಗಿ ಕೀರ್ತಿ ಹೇಳುತ್ತಾಳೆ. ಲಕ್ಷ್ಮೀಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚುತ್ತಾಳೆ. ಅಷ್ಟರಲ್ಲಿ ಚಿ...