ಭಾರತ, ಏಪ್ರಿಲ್ 9 -- ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಈ ವಾರ ಮುಕ್ತಾಯಗೊಳ್ಳಲಿದೆ. ಮಂಗಳವಾರ ಪ್ರಸಾರವಾದ 602ನೇ ಸಂಚಿಕೆಯ ಕಥೆ ಇಲ್ಲಿದೆ. ತನ್ನ ಮೊಬೈಲ್‌ಗೆ ಅನಾಮಧೇಯ ನಂಬರ್‌ನಿಂದ ಬಂದ ಮೆಸೇಜ್‌ ನೋಡಿ ಕಾವೇರಿ ಗಾಬರಿಯಾಗುತ್ತಾಳೆ. ಯಾರೋ ಬೇಕಂತಲೇ ನನ್ನನ್ನು ಆಟ ಆಡಿಸುತ್ತಿದ್ದಾರೆ ಎಂದು ಕೂಲ್‌ ಆಗಿದ್ದ ಕಾವೇರಿಗೆ ಅವಳು ಲಕ್ಷ್ಮೀ ಹಾಗೂ ಕೀರ್ತಿ ಕೊಲೆ ಪ್ರಯತ್ನದ ಬಗ್ಗೆ ಮಾತನಾಡಿರುವ ವಿಡಿಯೋ ನೋಡಿ ಶಾಕ್‌ ಆಗುತ್ತದೆ. ವೈಷ್ಣವ್‌ ಮೊಬೈಲ್‌ಗೂ ಈ ಮೆಸೇಜ್‌ ಬಂದಿದೆ ಎಂದು ತಿಳಿದು ಅವನಿಗೆ ಗೊತ್ತಾಗದಂತೆ ಮಗನ ಮೊಬೈಲ್‌ ತೆಗೆದುಕೊಂಡು ಹೊರಗೆ ಬರುತ್ತಾಳೆ.

ವೈಷ್ಣವ್‌ ಮೊಬೈಲ್‌ಗೆ ಬಂದ ವಿಡಿಯೋವನ್ನು ಡಿಲೀಟ್‌ ಮಾಡುತ್ತಾಳೆ. ಈ ಮೊಬೈಲ್‌ ಅವನ ಬಳಿ ಇದ್ದರೆ ಮತ್ತೊಮ್ಮೆ ಮೆಸೇಜ್‌ ಬಂದರೂ ಬರಬಹುದು ಎಂದು ಮಗನ ಮೊಬೈಲನ್ನು ನೀರಿಗೆ ಹಾಕುತ್ತಾಳೆ. ಆಗ ಕಾವೇರಿ ನಂಬರಿಗೆ ಕರೆ ಬರುತ್ತದೆ. ನಾನು ಏನಂತ ಈಗ ಗೊತ್ತಾಯ್ತಾ? ಮಗನ ಮೊಬೈಲ್‌ ನೀರಿಗೆ ಹಾಕಿದ ಮಾತ್ರಕ್ಕೆ ಅವನು ಈ ವಿಡಿಯೋ ನೋಡುವುದ...