ಭಾರತ, ಏಪ್ರಿಲ್ 10 -- ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಈ ವಾರ ಮುಕ್ತಾಯಗೊಳ್ಳಲಿದೆ. ಬುಧವಾರ ಪ್ರಸಾರವಾದ 603ನೇ ಸಂಚಿಕೆಯ ಕಥೆ ಇಲ್ಲಿದೆ. ನಿನ್ನನ್ನು ಭೇಟಿ ಆಗಬೇಕು ಎಂದು ಅನಾಮಧೇಯ ವ್ಯಕ್ತಿ ಹೇಳಿದ್ದಕ್ಕೆ ಭಯಗೊಂಡ ಕಾವೇರಿ ಆತನನ್ನು ಭೇಟಿ ಆಗಲು ಬೆಟ್ಟದ ಬಳಿ ಬರುತ್ತಾಳೆ. ಆದರೆ ಅಲ್ಲಿ ಮಂಟಪ, ಮಧು ಮಕ್ಕಳಂತೆ ತಯಾರಾದ ಲಕ್ಷ್ಮೀಯನ್ನು ನೋಡಿ ಗಾಬರಿಯಾಗುತ್ತಾಳೆ. ಅವಳ ಜೊತೆಗೆ ಕೀರ್ತಿ ಇರುವುದನ್ನು ನೋಡಿ ಇನ್ನಷ್ಟು ಶಾಕ್‌ ಆಗುತ್ತಾಳೆ. ತಾನು ಅವರಿಬ್ಬರ ಕೊಲೆ ಪ್ರಯತ್ನದ ಬಗ್ಗೆ ಮಾತನಾಡಿದ ವಿಡಿಯೋ ನೋಡಿ ಕಾವೇರಿಗೆ ಭಯವಾಗುತ್ತದೆ.

ಆ ವಿಡಿಯೋ ನಿಮಗೆ ಹೇಗೆ ಸಿಕ್ಕಿತು? ಅದನ್ನು ರೆಕಾರ್ಡ್‌ ಮಾಡಿದ್ದು ಯಾರು ಎಂದು ಕಾವೇರಿ ಕೇಳುತ್ತಾಳೆ. ವಿಡಿಯೋ ಎಲ್ಲಿಂದ ಬಂತು, ಯಾರು ಕೊಟ್ಟಿದ್ದು ಎಂಬ ವಿಚಾರ ಈಗ ಬೇಕಾ ಅತ್ತೆ? ಮೊದಲು ವೈಷ್ಣವ್‌ನನ್ನು ಯಾರಿಗೆ ಕೊಟ್ಟು ಮದುವೆ ಮಾಡಿಸುತ್ತೀರಿ ಎಂದು ನೀವು ಹೇಳಿ ಎಂದು ಲಕ್ಷ್ಮೀ ಹಾಗೂ ಕೀರ್ತಿ ಕೇಳುತ್ತಾರೆ. ವೈಷ್ಣವ್‌ ನನಗೆ ಬೇಕು, ನನಗೆ ಮದು...