ಭಾರತ, ಏಪ್ರಿಲ್ 11 -- ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಈ ವಾರ ಮುಕ್ತಾಯಗೊಳ್ಳಲಿದೆ. ಗುರುವಾರ ಪ್ರಸಾರವಾದ 604ನೇ ಸಂಚಿಕೆಯ ಕಥೆ ಇಲ್ಲಿದೆ. ಲಕ್ಷ್ಮೀ ಹಾಗೂ ಕೀರ್ತಿಯೇ ತನ್ನನ್ನು ಬೆಟ್ಟಕ್ಕೆ ಕರೆಸಿಕೊಂಡಿದ್ದು ಎಂದು ತಿಳಿದು ಕಾವೇರಿ ಸಿಟ್ಟಾಗುತ್ತಾಳೆ. ಅವರಿಬ್ಬರನ್ನೂ ಕೊಲ್ಲಲು ರಿವಾಲ್ವರ್‌ ತೆಗೆದುಕೊಳ್ಳುತ್ತಾಳೆ. ಅಷ್ಟರಲ್ಲಿ ಸುಪ್ರೀತಾ ಬಂದು ಲಕ್ಷ್ಮೀ ಹಾಗೂ ಕೀರ್ತಿಯನ್ನು ಕಾವೇರಿಯಿಂದ ರಕ್ಷಿಸುತ್ತಾಳೆ. ಅಷ್ಟೊತ್ತಿಗೆ ಮನೆಯವರೆಲ್ಲಾ ಆ ಸ್ಥಳಕ್ಕೆ ಬರುತ್ತಾರೆ, ನಾನು ಏನೂ ತಪ್ಪು ಮಾಡಿಲ್ಲ ಎನ್ನುವಂತೆ ಕಾವೇರಿ ನಾಟಕ ಮಾಡುತ್ತಾಳೆ. ಆದರೆ ಅಷ್ಟರಲ್ಲಿ ಎಲ್ಲರಿಗೂ ಕಾವೇರಿ ಅಸಲಿ ಮುಖ ಗೊತ್ತಾಗಿರುತ್ತದೆ.

ವೈಷ್ಣವ್‌ ಕೂಡಾ ಅಲ್ಲಿಗೆ ಬರುತ್ತಾನೆ, ನನ್ನ ಜೊತೆ ಯಾರಿಲ್ಲದಿದ್ದರೂ ನನ್ನ ಮಗ ಇದ್ದಾನೆ, ಅವನು ನನ್ನ ಮಾತು ಕೇಳುತ್ತಾನೆ, ನನ್ನನ್ನು ನಂಬುತ್ತಾನೆ ಎಂದು ಕಾವೇರಿ ಹೇಳುತ್ತಾಳೆ. ಆದರೆ ವೈಷ್ಣವ್‌ ಕೂಡಾ ಅಮ್ಮನ ತಪ್ಪನ್ನು ಎತ್ತಿ ತೋರಿಸುತ್ತಾನೆ. ಕೋರ್ಟ್‌ ನೀನು ತಪ್ಪು ...