ಭಾರತ, ಜನವರಿ 26 -- Zee Kannada: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ 'ಲಕ್ಷ್ಮೀ ನಿವಾಸ' ಈ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಕಲಾವಿದರು ಜೀ ಎಂರ್ಟಟೈನ್ಮೆಂಟ್ ಕಾರ್ಯಕ್ರಮದಲ್ಲಿ, ತಮ್ಮ ಪ್ರತಿಭಾ ಪ್ರದರ್ಶನ ಮಾಡಿದ್ದಾರೆ. ಯಾರೂ ಅಂದುಕೊಂಡಿರದ ರೀತಿಯಲ್ಲಿ ಮೂವರು ತಮ್ಮ ಕಲಾ ಪ್ರದರ್ಶನ ನೀಡಿದ್ದಾರೆ. 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿರುವ ಭಾವನಾಳ ತಂದೆ ಶ್ರೀನಿವಾಸ್‌ ತಬಲಾ ನುಡಿಸಿದ್ದಾರೆ. ಜೀ ಕನ್ನಡ ವೇದಿಕೆಯಲ್ಲಿ ಲೈವ್‌ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.

ಇವರೆಲ್ಲರಲ್ಲಿ ಇಂತಹ ಒಬ್ಬ ಕಲಾವಿದನಿದ್ದಾನೆ ಎಂದು ಯಾರೂ ಅಂದಾಜು ಮಾಡಲೂ ಸಾಧ್ಯವಿಲ್ಲ. ಆ ರೀತಿಯಲ್ಲಿ ತಮ್ಮ ಪ್ರತಿಭೆ ತೋರ್ಪಡಿಸಿದ್ದಾರೆ. ವೀಣಾ ತುಂಬಾ ಸುಶ್ರಾವ್ಯವಾಗಿ ಹಾಡು ಹಾಡಿದ್ದಾರೆ. "ಬಾನ ತೊರೆದು ನೀಲಿ ಮರೆಯಾಯಿತೇತಕೆ ಕರಗೀತೆ ಈ ಮೋಡ ನಿಟ್ಟುಸಿರ ಶಾಖಕೆ" ಎಂಬ ಹಾಡನ್ನು ಹಾಡಿ ಎಲ್ಲರನ್ನೂ ಭಾವನಾಲೋಕಕ್ಕೆ ಕೊಂಡೊಯ್ದಿದ್ದಾರೆ. ಸಂತೋಷ್ ಅವರಿಗೆ ಹಾರ್ಮೋನಿಯಂ ನುಡಿಸುವ ಮೂಲಕ ಸಾತ್ ನೀಡ...