Bangalore, ಮೇ 6 -- ಬೆಂಗಳೂರು: ಲಕ್ಷ್ಮೀ ಬಾರಮ್ಮ ಸೀರಿಯಲ್‌ನ ನಟಿ ಕವಿತಾ ಮತ್ತು ಚಂದನ್‌ ಕುಮಾರ್‌ ದಂಪತಿ ಇನ್‌ಸ್ಟಾಗ್ರಾಂನಲ್ಲಿ ಹೊಸ ಅಪ್‌ಡೇಟ್‌ ನೀಡಿದ್ದಾರೆ. ತಾವಿಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಫೋಟೋ ಸುದ್ದಿ ಹಂಚಿಕೊಂಡಿದ್ದಾರೆ. ಈ ಜೋಡಿಗೆ ಸೋಷಿಯಲ್‌ ಮೀಡಿಯಾದಲ್ಲಿ ಅಭಿನಂದನೆಗಳ ಮಹಾಪೂರವೇ ಬರುತ್ತಿದೆ. ಕಿರುತೆರೆ ಮತ್ತು ಹಿರಿತೆರೆ ಕಲಾವಿದರೂ ಇವರಿಗೆ ಕಂಗ್ರಾಜ್ಯಲೇಷನ್‌ ಹೇಳುತ್ತಿದ್ದಾರೆ.

ನಟಿ ಕವಿತ ಲಕ್ಷ್ಮೀಬಾರಮ್ಮ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಚಂದನ್‌ ಕುಮಾರ್‌ ಕೂಡ ಸೀರಿಯಲ್‌ ನಟ. ಸಿನಿಮಾಗಳಲ್ಲೂ ನಟಿಸಿದ್ದಾರೆ. ಚಂದನ್‌ ಕನ್ನಡ ಮಾತ್ರವಲ್ಲದೆ ತೆಲುಗು ಚಿತ್ರಗಳಲ್ಲೂ ನಟಿಸಿದ್ದಾರೆ. ಲಕ್ಷ್ಮಿ ಬಾರಮ್ಮ ಸೀರಿಯಲ್‌ನಲ್ಲಿ ಕವಿತಾ ಮತ್ತು ಚಂದನ್‌ ಕುಮಾರ್‌ ಜತೆಯಾಗಿ ನಟಿಸಿದ್ದರು.

ಕೊರೊನಾ ಲಾಕ್‌ಡೌನ್‌ ಸಮಯದಲ್ಲಿಯೇ ಈ ಜೋಡಿ ವಿವಾಹವಾಗಿದ್ದರು. ಮಾಸ್ಕ್‌ ಧರಿಸಿಯೇ ಮದುವೆಯಾಗಿ ಸುದ್ದಿಯಾಗಿದ್ದರು. 2021ರ ಮೇ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರ...