ಭಾರತ, ಮಾರ್ಚ್ 31 -- ಐಪಿಎಲ್‌ 18ನೇ ಆವೃತ್ತಿಯಲ್ಲಿ ಮಾರ್ಚ್‌ ತಿಂಗಳ ಆರಂಭಿಕ ಪಂದ್ಯಗಳು ಮುಕ್ತಾಯಗೊಂಡಿದೆ. ಇದೀಗ ಏಪ್ರಿಲ್ ತಿಂಗಳ ಉದ್ದಕ್ಕೂ ಪಂದ್ಯಾವಳಿಯ ಜೋಶ್‌ ಹೆಚ್ಚಲಿದ್ದು, ಏಪ್ರಿಲ್ 1ರ ಮಂಗಳವಾರ ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ಪಂಜಾಬ್ ಕಿಂಗ್ಸ್ (PBKS) ತಂಡಗಳ ನಡುವೆ ಪಂದ್ಯ ನಡೆಯಲಿದೆ. ಉಭಯ ತಂಡಗಳಿಗೆ ಹೊಸ ನಾಯಕರ ನೇಮಕವಾದ ನಂತರ ಈ ಎರಡು ತಂಡಗಳ ನಡುವೆ ಮೊದಲ ಪಂದ್ಯ ನಡೆಯುತ್ತಿದೆ. ಪ್ರಸಕ್ತ ಆವೃತ್ತಿಯಲ್ಲಿ ಲಕ್ನೋದ ಏಕಾನಾ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯುತ್ತಿದ್ದು, ಲಕ್ನೋ ತಂಡಕ್ಕೆ ತವರಿನ ಅಭಿಮಾನಿಗಳ ಬೆಂಬಲ ಸಿಗಲಿದೆ.

ಇದನ್ನೂ ಓದಿ | ಆರ್‌ಸಿಬಿ ವಿರುದ್ಧ ಸಿಎಸ್‌ಕೆ ಸೋಲಿಗೆ 7 ಪ್ರಮುಖ ಕಾರಣಗಳು; ಈ ತಪ್ಪು ತಿದ್ದಿಕೊಂಡರೆ ಮಾತ್ರ 6ನೇ ಕಪ್‌ ಗೆಲುವು ಸಾಧ್ಯ

Published by HT Digital Content Services with permission from HT Kannada....