ಭಾರತ, ಏಪ್ರಿಲ್ 1 -- ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚಿದ ಪಂಜಾಬ್ ಕಿಂಗ್ಸ್​ ತಂಡವು 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನ 13ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಸತತ 2ನೇ ಗೆಲುವಿನ ಜೊತೆಗೆ ಅಂಕಪಟ್ಟಿಯಲ್ಲಿ 5ರಿಂದ 2ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಮತ್ತೊಂದೆಡೆ ತವರಿನಲ್ಲಿ ಮುಖಭಂಗ ಅನುಭವಿಸಿದ್ದರ ಜೊತೆಗೆ 2ನೇ ಸೋಲಿಗೆ ಶರಣಾದ ಲಕ್ನೋ, 3ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಕುಸಿದಿದೆ.

ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಲ್‌ಎಸ್‌ಜಿ ತಂಡ 172 ರನ್‌ಗಳ ಗುರಿಯನ್ನು ನಿಗದಿಪಡಿಸಿತು. ಇದನ್ನು ಪಿಬಿಕೆಎಸ್ 16.2 ಓವರ್‌ಗಳಲ್ಲಿ ಸುಲಭವಾಗಿ ಬೆನ್ನಟ್ಟಿತು. ಪ್ರಭುಸಿಮ್ರಾನ್ ಸಿಂಗ್ (34 ಎಸೆತಗಳಲ್ಲಿ 69) ಮತ್ತು ಶ್ರೇಯಸ್ ಅಯ್ಯರ್ (30 ಎಸೆತಗಳಲ್ಲಿ ಔಟಾಗದೆ 52) ಅರ್ಧಶತಕ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇವರಿಬ್ಬರ ಜೊತೆಗೆ ಬೌಲಿಂಗ್​ನಲ್ಲಿ ಅರ್ಷದೀಪ್ ಸಿಂಗ್ ಪ್ರಮುಖ 3 ವಿಕೆಟ್ ಕಿತ್ತು ಲಕ್ನ...