ಭಾರತ, ಮಾರ್ಚ್ 24 -- ಐಪಿಎಲ್ 2025ರ ಆರಂಭದಲ್ಲೇ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಚುಟುಕು ಸ್ವರೂಪದಲ್ಲಿ ವೇಗದ ಬೌಲಿಂಗ್ ಪ್ರತಿಭೆಗಳಲ್ಲಿ ಒಬ್ಬರಾದ ಮಯಾಂಕ್ ಯಾದವ್ (Mayank Yadav), ಈ ಬಾರಿಯೂ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಆಡುತ್ತಿಲ್ಲ. ಆಗಾಗ ಗಾಯದ ಸಮಸ್ಯೆ ಎದುರಿಸುವ ವೇಗಿಗೆ ಜಾಗತಿಕ ಮಟ್ಟದಲ್ಲಿ ಬೆಳೆಯಲು ಮತ್ತೆ ಗಾಯದ ಸಮಸ್ಯೆ ಅಡ್ಡಿಪಡಿಸುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2025ರಲ್ಲಿ ಅಭಿಮಾನಿಗಳು ಕೂಡಾ ಈ ಎಕ್ಸ್‌ಪ್ರೆಸ್ ವೇಗಿಯನ್ನು ಕಣ್ತುಂಬಿಕೊಳ್ಳುವ ನಿರೀಕ್ಷೆಯಲ್ಲಿದ್ದರು. ಮಾಯಾಂಕ್‌ ಕೂಡಾ ತಮ್ಮ ವೃತ್ತಿಜೀವನದಲ್ಲಿ ದೈತ್ಯ ಹೆಜ್ಜೆಗಳನ್ನು ಇಡುವ ಇರಾದೆಯಲ್ಲಿದ್ದರು. ಆದರೆ ಅದಕ್ಕೆ ಮತ್ತೆ ಮತ್ತೆ ಹಿನ್ನಡೆಯಾಗುತ್ತಿದೆ.

ಐಪಿಎಲ್‌ ಪದಾರ್ಪಣೆ ಆವೃತ್ತಿಯಲ್ಲೇ 156.7 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ಮಿಂಚಿದ್ದ ವೇಗಿ ಕುರಿತು, ಲಕ್ನೋ ಸೂಪರ್ ಜೈಂಟ್ಸ್ ತರಬೇತುದಾರ ಜಸ್ಟಿನ್ ಲ್ಯಾಂಗರ್ ಮಾಹಿತಿ ನೀಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಮಾತನಾ...