नई दिल्ली,ಬೆಂಗಳೂರು,Bengaluru, ಏಪ್ರಿಲ್ 14 -- ಲಕ್ನೋ: ಐಪಿಎಲ್ 2025ರ 30ನೇ ಪಂದ್ಯ ಇಂದು ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ಸಂಜೆ 7:30ಕ್ಕೆ ಶುರುವಾಗಲಿದೆ. ಲಕ್ನೋ ಗೆಲುವಿನ ರಥ ನಿಲ್ಲಿಸಲು ಚೆನ್ನೈ ಸಜ್ಜಾಗಿದೆ. ಪ್ರಸ್ತುತ ಎಲ್​ಎಸ್​ಜಿ ಪ್ರಸ್ತುತ 6 ಪಂದ್ಯಗಳಲ್ಲಿ 4 ಗೆಲುವುಗಳೊಂದಿಗೆ 4ನೇ ಸ್ಥಾನದಲ್ಲಿದೆ. ಆದರೆ ಧೋನಿ ಪಡೆ ಆಡಿರುವ 6ರಲ್ಲಿ 1 ಗೆಲುವು, ಸತತ ಐದು ಸೋಲುಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದೆ. ಆದರೆ ಕಳೆದ ಪಂದ್ಯದಲ್ಲಿ ತವರಿನಲ್ಲೇ ಕೆಕೆಆರ್​ ವಿರುದ್ಧ ಮಣಿದಿತ್ತು. ಧೋನಿ ನಾಯಕತ್ವದಲ್ಲಿ ಸಹ ಉತ್ಸಾಹ ಕುಂದಿರುವಂತೆ ಕಂಡು ಬಂದಿತ್ತು. ಮತ್ತೊಂದೆಡೆ ಲಕ್ನೋ ತಂಡವು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ಗಮನ ಸೆಳೆದಿದೆ. ಬೌಲರ್​ಗಳ ಮೇಲೆ ದಂಡಯಾತ್ರೆ ನಡೆಸುವ ಮೂಲಕ ಬೃಹತ್ ಸ್ಕೋರಿದ್...