ಭಾರತ, ಜನವರಿ 30 -- ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಜೀವನ್‌ನ ಮನೆಯಲ್ಲಿದ್ದಾಳೆ. ಇಲ್ಲಿ ಗೌತಮ್‌ಗೆ ಭೂಮಿಕಾ ಇಲ್ಲದೆ ನಿದ್ದೆ ಬರ್ತಾ ಇಲ್ಲ. ಭೂಮಿಕಾಗೂ ಗೌತಮ್‌ ಗೊರಕೆ ಸದ್ದಿಲ್ಲದೆ ನಿದ್ದೆ ಬರ್ತಾ ಇಲ್ಲ. ಹೇಗೋ ಅರೆ ನಿದ್ದೆಯಲ್ಲಿ ಸಮಯ ಕಳೆಯುತ್ತಾರೆ. ಬೆಳಗ್ಗೆ ಎದ್ದಾಗ "ಏಕೆ ಇನ್ನೂ ಭೂಮಿಕಾ ಕಾಫಿ ತಂದು ಎಬ್ಬಿಸಿಲ್ಲ" ಎಂದು ಯೋಚಿಸುತ್ತಾರೆ. ಆಮೇಲೆ ಭೂಮಿಕಾ ಇಲ್ಲದೆ ಇರುವುದು ನೆನಪಾಗುತ್ತದೆ. ಒಟ್ಟಾರೆ, ಗೌತಮ್‌ಗೆ ಭೂಮಿಕಾ ಇಲ್ಲದೆ ಕೈಕಾಲೇ ಆಡುತ್ತಿಲ್ಲ.

ಸದಾಶಿವ ಮನೆಯಲ್ಲಿ ಮಂದಾಕಿನಿ ಜತೆ ಮಾತನಾಡುತ್ತ ಇದ್ದಾರೆ. ನಾನು ಸಾಹಿತ್ಯ ಸಮ್ಮೇಳನಕ್ಕೆ ಹೋಗಿ ಬರ್ತಿನಿ ಎನ್ನುತ್ತಾರೆ. ಆಗ ಅವರಿಗೆ ಸೋಫಾದ ಮೇಲೆ ಮಲಗಿರುವ ಜೀವ ಕಾಣಿಸುತ್ತಾರೆ. ಅರೇ ಇದೇನಿದು ಇವನು ಇಲ್ಲಿ ಮಲಗಿದ್ದಾನೆ ಎಂದುಕೊಳ್ಳುತ್ತಾರೆ. "ಹೆಂಡತಿ ಜತೆ ಜಗಳವಾಡಿ ತವರಿಗೆ ಕಳುಹಿಸಿ ಈಗ ಇಲ್ಲಿ ಮಲಗಿದ್ದಾನೆ" ಎನ್ನುತ್ತಾರೆ. ಮಂದಾಕಿನಿ ಜೀವನ ಎಬ್ಬಿಸುತ್ತಾರೆ. ಆಗ ಭೂಮಿಕಾ ಕೂಡ ಬರುತ್ತಾರೆ. "ಅಕ್ಕ ಮನೆ ಬಿಟ್ಟು ಬಂದಿದ್ದಾಳೆ" ಎಂದು ಜೀವ ಹೇಳುತ್ತಾನೆ...