ಭಾರತ, ಮಾರ್ಚ್ 16 -- ಬೆಂಗಳೂರು: ಚಲನಚಿತ್ರಗಳನ್ನು ಒಳ್ಳೆಯ ಉದ್ದೇಶಗಳಿಗೆ ಮಾದರಿಯಾಗಿ ಸ್ವೀಕರಿಸುವ ಜಮಾನ ಇದಲ್ಲ. ಅನೇಕ ಸಿನಿಮಾಗಳ ಮಾದರಿಯಲ್ಲಿ ಕೊಲೆ ಮತ್ತು ಹಣ ಸುಲಿಗೆ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಇಂತಹ ಕೃತ್ಯಗಳಿಗೆ ಪ್ರೇರಣೆಯಾದ ಎರಡು ಸಿನಿಮಾಗಳ ಹೆಸರು ಹೇಳುವುದಾದರೆ ಕನ್ನಡದ ದೃಶ್ಯ ಮತ್ತು ತೆಲುಗಿನ ಲಕ್ಕಿ ಭಾಸ್ಕರ್. ಲಕ್ಕಿ ಭಾಸ್ಕರ್‌ ಮಾದರಿಯಲ್ಲಿ ವಂಚನೆ ಎಸಗಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಪ್ರಕರಣ ಅದಕ್ಕೆ ಮತ್ತೊಂದು ಸೇರ್ಪಡೆ ಅಷ್ಟೇ. ಖಾಸಗಿ ಬ್ಯಾಂಕ್‌ ಒಂದರ ಉಪ ವ್ಯವಸ್ಥಾಪಕಿ ಹಣಕ್ಕಾಗಿ ವೃದ್ಧೆಗೆ ವಂಚಿಸಿರುವ ಪ್ರಕರಣ ಬೆಂಗಳೂರಿನ ಗಿರಿನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ವಂಚನೆಯಲ್ಲಿ ಭಾಗಿಯಾಗಿದ್ದ ಇಂಡಸ್ ಇಂಡ್ ಬ್ಯಾಂಕ್‌ನ ಉಪವ್ಯವಸ್ಥಾಪಕಿ ಮೇಘನಾ, ಆಕೆಯ ಪತಿ ಶಿವಪ್ರಸಾದ್, ಸ್ನೇಹಿತರಾದ ವರದರಾಜು ಮತ್ತು ಅನ್ವರ್ ಘೋಷ್ ಅವರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

ಫಿಕ್ಸ್‌ಡ್‌ ಅಕೌಂಟ್‌ ಮಾಡಿಕೊಡುವುದಾಗಿ ವೃದ್ಧೆಯೊಬ್ಬರಿಗೆ ಸುಳ್ಳು ಹೇಳಿದ ಮೇಘನಾ ಆರ್‌...