Bangalore, ಏಪ್ರಿಲ್ 22 -- ಲಂಬೋರ್ಗಿನಿ ಹೊಂದಿರುವ ಸ್ಯಾಂಡಲ್‌ವುಡ್‌ ನಟರು: ಲಂಬೋರ್ಗಿನಿ ವೇಗದ ಆವೇಗಕ್ಕೆ ಹೆಸರುವಾಸಿಯಾದ ವಿಲಾಸಿ, ದುಬಾರಿ ಕಾರು. ಈ ಕಾರು ಹೊಂದುವುದು ಪ್ರತಿಷ್ಠೆಯ ವಿಷಯವೂ ಹೌದು. ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಮೂವರು ನಟರಲ್ಲಿ ಮಾತ್ರ ಈ ಕಾರಿದೆ. ಪುನೀತ್‌ ರಾಜ್‌ಕುಮಾರ್‌ ಈ ಕಾರನ್ನು ತನ್ನ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ಗೆ ಮಹಿಳಾದಿನದ ಉಡುಗೊರೆಯಾಗಿ ನೀಡಿದ್ದರು. ಆದರೆ, ಈಗ ಇವರು ತನ್ನಲ್ಲಿ ಈ ಕಾರನ್ನು ಇಟ್ಟುಕೊಂಡಿಲ್ಲ.

ಲಂಬೋರ್ಗಿನಿ ಇಟಲಿಯ ಕಾರು ಕಂಪನಿಯ ಕಾರು. ಇದು ತನ್ನ ಐಕಾನಿಕ್‌ ವಿನ್ಯಾಸಕ್ಕೆ ಹೆಸರುವಾಸಿ. ಇದರ ಪರ್ಫಾಮೆನ್ಸ್‌ ಅಮೋಘ. ಇದರೊಂದಿಗೆ ಲಗ್ಷುರಿ ವಿಷಯಕ್ಕೂ ಫೇಮಸ್‌. ಟ್ರ್ಯಾಕ್ಟರ್‌ ಉತ್ಪಾದಿಸುತ್ತಿದ್ದ ಈ ಕಂಪನಿ ಸೂಪರ್‌ಕಾರ್‌ ಪವರ್‌ಹೌಸ್‌ ಆಗಿರೋದು ಇತಿಹಾಸ. ಈಗ ಇದು ನಂಬಿಕಸ್ಥ ಮತ್ತು ಪ್ರತಿಷ್ಠಿತ ಕಾರು ಕಂಪನಿಯಾಗಿ ಜನಪ್ರಿಯತೆ ಪಡೆದಿದೆ. ಭಾರತದ ಹಲವು ಕಲಾವಿದರು, ಬಿಸ್ನೆಸ್‌ಮ್ಯಾನ್‌ಗಳು ಈ ಕಾರು ಹೊಂದಿದ್ದಾರೆ. ಈ ಪವರ್‌ಫು...