ಭಾರತ, ಮಾರ್ಚ್ 3 -- ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ ಅವರ ದೇಹ ತೂಕದ ಕುರಿತು ಮಾತನಾಡಿದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಶಮಾ ಮೊಹಮ್ಮದ್‌ ಅವರು ವಿವಾದಕ್ಕೆ ಗುರಿಯಾಗಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ನಿಮ್ಮ ಗೆಲುವಿನ ಶೇಕಡವಾರು ತೋರಿಸಿ ಎಂದು ಪ್ರತಿಕ್ರಿಯಿಸಿದೆ. ಬಿಜೆಪಿ ಕಿಡಿಕಾರಿರುವುದರ ನಡುವೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕಾಂಗ್ರೆಸ್ ನಾಯಕಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಅಂತಿಮ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 17 ಎಸೆತಗಳಲ್ಲಿ ತಲಾ ಒಂದೊಂದು ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ 15 ರನ್ ಗಳಿಸಿ ನಿರಾಸೆ ಮೂಡಿಸಿದರು. ಈ ಬೆನ್ನಲ್ಲೇ ಕಾಂಗ್ರೆಸ್ ವಕ್ತಾರೆ ಎಕ್ಸ್​​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಕ್ರಿಕೆಟಿಗ ರೋಹಿತ್​ ದಪ್ಪ ಮತ್ತು ಪರಿಣಾಮಕಾರಿ ನಾಯಕನಲ್ಲ ಎಂದು ಬರೆದಿದ್ದಾರೆ. ಆದರೆ, ವಿವಾದವಾಗುತ್ತಿದ್ದಂತೆ ಪೋಸ್ಟ್ ಅಳಿಸಿದ್ದಾರೆ.

ಒಬ್ಬ ಕ್ರೀಡಾಪಟುವಾಗಿ ರೋಹಿತ್​ ಶರ್ಮಾ ತುಂಬಾ ದಪ್ಪಗಿದ್ದಾರೆ. ಅವರು ತೂಕವನ್ನು ಇಳಿಸಿ...