ಭಾರತ, ಮೇ 13 -- 'ಹಿಟ್​​ಮ್ಯಾನ್' ರೋಹಿತ್ ಶರ್ಮಾ ಮತ್ತು ಸೂಪರ್​ ಸ್ಟಾರ್​ ಬ್ಯಾಟರ್ ವಿರಾಟ್ ಕೊಹ್ಲಿ ಇಬ್ಬರು ಆಧುನಿಕ ಕ್ರಿಕೆಟ್​ನ ದಿಗ್ಗಜರು ಒಂದೇ ಒಂದು ವಾರದೊಳಗೆ ಟೆಸ್ಟ್​​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ರೋಹಿತ್ ತಮ್ಮ 38ನೇ, ಕೊಹ್ಲಿ 36ನೇ ವಯಸ್ಸಿನಲ್ಲಿ ಸುದೀರ್ಘ ಸ್ವರೂಪಕ್ಕೆ ವಿದಾಯ ಹೇಳಿದ್ದಾರೆ.

ಇದೀಗ ಕೊಹ್ಲಿ-ರೋಹಿತ್ ನಂತರ ಟೆಸ್ಟ್​ ಕ್ರಿಕೆಟ್​​ಗೆ ನಿವೃತ್ತಿ ಹೇಳಲು ಐವರು ಆಟಗಾರರು ಸಜ್ಜಾಗಿದ್ದಾರೆ. ಈ ಪೈಕಿ ಇಬ್ಬರು ಬೌಲರ್​ಗಳು, ಇಬ್ಬರು ಬ್ಯಾಟರ್​​ಗಳು, ಒಬ್ಬ ಬೌಲರ್​​ ಈ ಸಾಲಿನಲ್ಲಿದ್ದಾರೆ. ರಿಟೈರ್ ಆಗಲಿರುವ ಸಂಭವನೀಯ ಆಟಗಾರರು ಯಾರು? ಇಲ್ಲಿದೆ ಪಟ್ಟಿ.

ಅನುಭವಿ ಸ್ಪಿನ್ ಆಲ್​​ರೌಂಡರ್ ರವೀಂದ್ರ ಜಡೇಜಾ ಅವರು ನಿವೃತ್ತಿ ನೀಡಬಹುದಾದ ಆಟಗಾರರ ಪಟ್ಟಿಗೆ ಸೇರಿದ್ದಾರೆ. 36 ವರ್ಷದ ಜಡೇಜಾ ಈವರೆಗೆ 80 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 3370 ರನ್ ಮತ್ತು 323 ವಿಕೆಟ್ ಪಡೆದಿದ್ದಾರೆ. ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದ ಬಳಿಕ ರೋಹಿತ್ ಮತ್ತು ಕೊಹ್ಲಿ ಜೊತೆಗೆ ಜಡೇಜಾ ನಿವೃತ್ತರಾಗಿದ್ದ...