ಭಾರತ, ಮಾರ್ಚ್ 7 -- 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದ ವೇಳೆ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರು ಆನ್​ಫೀಲ್ಡ್​ನಲ್ಲಿ ಎನರ್ಜಿ ಡ್ರಿಂಕ್ ಕುಡಿಯುತ್ತಿರುವ ಫೋಟೋ ವೈರಲ್ ಆದ ನಂತರ ವಿವಾದದ ಜೊತೆಗೆ ಅಪಾರ ಬೆಂಬಲವೂ ವ್ಯಕ್ತವಾಗಿದೆ. ಇದೀಗ ನಾಯಕ ರೋಹಿತ್​ ಶರ್ಮಾ ಅವರನ್ನು ಡುಮ್ಮ ಎಂದು ಕರೆದಿದ್ದ ರಾಷ್ಟ್ರೀಯ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಅವರು ವೇಗಿ ಶಮಿ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಪವಿತ್ರ ರಂಜಾನ್ ಉಪವಾ ಆಚರಿಸುವುದು ಇಸ್ಲಾಂ ಧರ್ಮದ ಕರ್ತವ್ಯ. ಆರೋಗ್ಯವಂತ ಪುರುಷ ಅಥವಾ ಮಹಿಳೆಯರು ರೋಜಾವನ್ನು ಆಚರಿಸದಿದ್ದರೆ ಅಪರಾಧಿಗಳಾಗುತ್ತಾರೆ. ಅದು ಪಾಪ ಮತ್ತು ಧಾರ್ಮಿಕ ತತ್ವಗಳಿಗೆ ವಿರುದ್ಧ. ಉದ್ದೇಶಪೂರ್ವಕವಾಗಿ ಉಪವಾಸ ತಪ್ಪಿಸಿದರೆ ಅವರು ಪಾಪಿಗಳು. ಕ್ರಿಕೆಟಿಗ ಮೊಹಮ್ಮದ್ ಶಮಿ ಕೂಡ ಉಪವಾಸವನ್ನು ಆಚರಿಸಲಿಲ್ಲ. ಅವರು ಪಾಪ ಮಾಡಿದ್ದಾರೆ. ಅವರು ಅಪರಾಧಿ ಎಂದು ವಿಡಿಯೊ ಹೇಳಿಕೆಯಲ್ಲಿ ಭಾರತ ಮುಸ್ಲಿಂ ಜಮಾತ್‌ ಅಧ್ಯಕ್ಷ ಮೌಲಾನಾ ಶಹಾಬುದ್ದೀನ...