ಭಾರತ, ಮಾರ್ಚ್ 10 -- ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಕ್ಕೆ ಅದ್ಧೂರಿ ತೆರೆ ಬಿದ್ದಿದೆ. ದುಬೈನಲ್ಲಿ ನಡೆದ ಫೈನಲ್​ನಲ್ಲಿ ನ್ಯೂಜಿಲೆಂಡ್ ಮಣಿಸಿದ ಭಾರತ 3ನೇ ಟ್ರೋಫಿಗೆ ಮುತ್ತಿಕ್ಕಿದೆ. ಭಾರತ ಈ ಹಿಂದೆ 2013 ಮತ್ತು 2002ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ರೋಹಿತ್​ ಪಡೆಗೆ ಇದು ಸತತ ಎರಡನೇ ಐಸಿಸಿ ಟ್ರೋಫಿಯಾಗಿದೆ. 2024ರಲ್ಲಿ ಟಿ20 ವಿಶ್ವಕಪ್ ಗೆದ್ದಿತ್ತು. ಟೂರ್ನಿ ಮುಗಿದ ಮರುದಿನವೇ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಸೋಮವಾರ (ಮಾ 10) ಚಾಂಪಿಯನ್ಸ್ ಟ್ರೋಫಿಯ 'ಟೀಮ್ ಆಫ್ ದಿ ಟೂರ್ನಮೆಂಟ್' ಅನ್ನು ಪ್ರಕಟಿಸಿದೆ. ಆದರೆ ಟ್ರೋಫಿ ರೋಹಿತ್ ಶರ್ಮಾಗೆ ಐಸಿಸಿ ತಂಡದಲ್ಲಿ ಸ್ಥಾನ ಸಿಗದಿರುವುದು ಅಚ್ಚರಿ ಮೂಡಿಸಿದೆ. ಹೀಗಿದ್ದರೂ ಐಸಿಸಿ ಪ್ರಕಟಿಸಿದ 12 ಸದಸ್ಯರ ತಂಡದಲ್ಲಿ ಭಾರತೀಯರದ್ದೇ ಸಿಂಹಪಾಲು. ವಿರಾಟ್ ಕೊಹ್ಲಿ ಸೇರಿ 6 ಭಾರತೀಯರು ಸ್ಥಾನ ಪಡೆದಿದ್ದಾರೆ.

ಐಸಿಸಿ ಪ್ರಕಟಿಸಿದ ತಂಡದಲ್ಲಿ 54.50ರ ಬ್ಯಾಟಿಂಗ್ ಸರಾಸರಿಯಲ್ಲಿ ವಿರಾಟ್ ಕೊಹ್ಲಿ 218 ರನ್ ಗಳಿಸಿದ್ದು, ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿ...