ಭಾರತ, ಏಪ್ರಿಲ್ 27 -- ಐಪಿಎಲ್​ನಲ್ಲಿ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾದ ಸನ್​ರೈಸರ್ಸ್​ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಅವರು ಪಂದ್ಯಗಳ ಅವಧಿಯಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತಾರೆ. 400 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಮೌಲ್ಯ ಹೊಂದಿರುವ ಕಾವ್ಯಾ ಅವರ ತಂದೆ 25 ಸಾವಿರ ಕೋಟಿಗೂ ಹೆಚ್ಚು ಆಸ್ತಿ ಮೌಲ್ಯ ಹೊಂದಿದ್ದಾರೆ.

ಕಾವ್ಯಾ ಮಾರನ್ ಅವರ ತಂದೆ ಹೆಸರು ಕಲಾನಿಧಿ ಮಾರನ್. ಉದ್ಯಮ ರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಅವರು ಸಿನಿಮಾ ಕ್ಷೇತ್ರದಲ್ಲೂ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಸನ್​ ಪಿಕ್ಚರ್ಸ್ ಬ್ಯಾನರ್​ನಡಿ ಅನೇಕ ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ಕಾವ್ಯಾ ಅವರ ತಂದೆ ನಿರ್ಮಿಸಿದ ಚಿತ್ರಗಳಾವುವು? ಇಲ್ಲಿದೆ ವಿವರ.

ಎಂದಿರನ್ (2010): ಸೂಪರ್​ಸ್ಟಾರ್ ರಜನಿಕಾಂತ್ ಮತ್ತು ಐಶ್ವರ್ಯ ರೈ ನಟನೆಯ ಈ ರೋಬೋ ಚಿತ್ರವು ದೊಡ್ಡ ಬ್ಲಾಕ್​ ಬಸ್ಟರ್​ ಆಗಿತ್ತು. ಆಗಲೇ ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಲಾಗಿತ್ತು. ಅದರ ದುಪ್ಪಟ್ಟು ಗಳಿಕೆ ಮಾಡಿತ್ತು.

ಸರ್ಕಾರ್ (2018): ಎಆರ್​ ಮುರು...