ಭಾರತ, ಏಪ್ರಿಲ್ 3 -- ಆಂಗ್​ಕ್ರಿಶ್ ರಘುವಂಶಿ (50), ವೆಂಕಟೇಶ್ ಅಯ್ಯರ್ (60) ಅವರ ಬ್ಯಾಟಿಂಗ್ ವೈಭವ ಮತ್ತು ಬೌಲರ್​​ಗಳ ಮಾರಕ ದಾಳಿಯ ಬಲದಿಂದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 80 ರನ್​ಗಳ ಭರ್ಜರಿ ಗೆಲುವು ದಾಖಲಿಸಿತು. 2024ರ ಫೈನಲ್​ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರ ಹಾಕಿಕೊಂಡಿದ್ದ ಹೈದರಾಬಾದ್ ಪ್ರಸಕ್ತ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲಿಗೆ ಶರಣಾಗಿದೆ. ಈ ಗೆಲುವಿನೊಂದಿಗೆ ಕೆಕೆಆರ್ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಇದು ಕೋಲ್ಕತ್ತಾದ ಎರಡನೇ ಗೆಲುವು. ಬ್ಯಾಟಿಂಗ್​​ನಲ್ಲಿ ವಿಧ್ವಂಸ ಸೃಷ್ಟಿಸುತ್ತಿದ್ದ ಎಸ್​ಆರ್​ಹೆಚ್ ಬ್ಯಾಟರ್ಸ್​ ಈಗ ಸದ್ದಿಲ್ಲದೆ ಔಟಾಗುತ್ತಿದ್ದಾರೆ.

ಕೋಲ್ಕತ್ತಾದ ಈಡನ್ ಗಾರ್ಡನ್ಸ್​​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್ ನಡೆಸಿದ ಕೆಕೆಆರ್, ಕೆಟ್ಟ ಆರಂಭದ ಹೊರತಾಗಿಯೂ ನಿಗದಿತ 20 ಓವರ್​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 200 ರನ್ ಕಲೆ ಹಾಕಿತು. ಆದರೆ ಈ ಗುರಿ ಬೆನ್ನಟ್ಟಿದ ಎಸ್​ಆರ್​​ಹೆಚ್...