ಭಾರತ, ಏಪ್ರಿಲ್ 3 -- ಆಂಗ್ಕ್ರಿಶ್ ರಘುವಂಶಿ (50), ವೆಂಕಟೇಶ್ ಅಯ್ಯರ್ (60) ಅವರ ಬ್ಯಾಟಿಂಗ್ ವೈಭವ ಮತ್ತು ಬೌಲರ್ಗಳ ಮಾರಕ ದಾಳಿಯ ಬಲದಿಂದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 80 ರನ್ಗಳ ಭರ್ಜರಿ ಗೆಲುವು ದಾಖಲಿಸಿತು. 2024ರ ಫೈನಲ್ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರ ಹಾಕಿಕೊಂಡಿದ್ದ ಹೈದರಾಬಾದ್ ಪ್ರಸಕ್ತ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲಿಗೆ ಶರಣಾಗಿದೆ. ಈ ಗೆಲುವಿನೊಂದಿಗೆ ಕೆಕೆಆರ್ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಇದು ಕೋಲ್ಕತ್ತಾದ ಎರಡನೇ ಗೆಲುವು. ಬ್ಯಾಟಿಂಗ್ನಲ್ಲಿ ವಿಧ್ವಂಸ ಸೃಷ್ಟಿಸುತ್ತಿದ್ದ ಎಸ್ಆರ್ಹೆಚ್ ಬ್ಯಾಟರ್ಸ್ ಈಗ ಸದ್ದಿಲ್ಲದೆ ಔಟಾಗುತ್ತಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್ ನಡೆಸಿದ ಕೆಕೆಆರ್, ಕೆಟ್ಟ ಆರಂಭದ ಹೊರತಾಗಿಯೂ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 200 ರನ್ ಕಲೆ ಹಾಕಿತು. ಆದರೆ ಈ ಗುರಿ ಬೆನ್ನಟ್ಟಿದ ಎಸ್ಆರ್ಹೆಚ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.