ಭಾರತ, ಏಪ್ರಿಲ್ 27 -- ಪ್ರಯಾಣದ ವೇಳೆ ಹೆಚ್ಚು ಲಗೇಜ್‌ಗಳು ರೈಲು ಪ್ರಯಾಣ ಸೂಕ್ತ. ಹೀಗಾಗಿ ಜನರು ಭಾರತೀಯ ರೈಲ್ವೆ ಪ್ರಯಾಣವನ್ನು ಆಯ್ಕೆ ಮಾಡುತ್ತಾರೆ. ರೈಲು ಪ್ರಯಾಣದ ಸಮಯದಲ್ಲಿ ಪ್ರಯಾಣಿಕರ ಲಗೇಜ್‌ಗಳು ಅಥವಾ ಸಾಮಾನುಗಳು ಕಳೆದುಹೋಗುವ ಪ್ರಕರಣಗಳು ಆಗಾಗ ವರದಿಯಾಗುತ್ತವೆ. ಲಗೇಜ್‌ ಕಳೆದುಹೋದರೆ, ಹಾನಿಯಾದರೆ ಅಥವಾ ಕಳ್ಳತನವಾದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.‌ ಮೇಲಿಂದ ಮೇಲೆ ಕಳ್ಳತನದಂತಹ ಪ್ರಕರಣಗಳು ವರದಿಯಾದ ನಂತರ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಗಣಿಸಿ, ರೈಲ್ವೆಯು ಕೆಲವೊಂದು ಸೌಲಭ್ಯಗಳನ್ನು ನೀಡುತ್ತಿದೆ. ಇದರಲ್ಲಿ ಕಳೆದುಹೋದ ಲಗೇಜ್‌ಗಳನ್ನು ಮರುಪಡೆಯುವುದು ಕೂಡಾ ಸೇರುತ್ತದೆ.

ರೈಲಿನಲ್ಲಿ ಕಳೆದುಹೋದ ಸಾಮಾನುಗಳನ್ನು ಮತ್ತೆ ಪಡೆಯಲು ವ್ಯವಸ್ಥೆಗಳಿವೆ. ಅಲ್ಲದೆ ಒಂದು ವೇಳೆ ಸಿಗದಿದ್ದರೇ ಹಣ ಮರುಪಾವತಿ ವ್ಯವಸ್ಥೆಯೂ ಇದೆ. ಹೆಚ್ಚಿನವರಿಗೆ ಈ ಬಗ್ಗೆ ಗೊತ್ತಿರುವುದಿಲ್ಲ. ಇದಕ್ಕಾಗಿ ಅಗತ್ಯ ಮಾಹಿತಿ ಇಲ್ಲಿದೆ. ಇತ್ತೀಚೆಗೆ ಅಮೃತಸರ-ಬಿಲಾಸ್‌ಪುರ ಛತ್ತೀಸ್‌ಗಢ ಎಕ್ಸ್‌ಪ್ರೆಸ್‌ನಲ್ಲಿ ...