ಭಾರತ, ಮಾರ್ಚ್ 25 -- ಭಾರತೀಯ ರೈಲ್ವೆ ಸೀಟು ಹಂಚಿಕೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲು ಹೊರಟಿದೆ. ಪ್ರಯಾಣದ ಅನುಕೂಲ ಮತ್ತು ಪ್ರವೇಶ ಸಾಧ್ಯತೆಯನ್ನು ಸುಧಾರಿಸುವ ಸಲುವಾಗಿ ಹಿರಿಯ ನಾಗರಿಕರು, ಮಹಿಳೆಯರು ಮತ್ತು ಅಂಗವಿಕಲರಿಗೆ ಕೆಳಗಿನ ಬರ್ತ್‌ಗಳಲ್ಲಿ ಹೆಚ್ಚು ಸೀಟುಗಳನ್ನು ಒದಗಿಸುವ ನಿರ್ಧಾರಕ್ಕೆ ಬಂದಿದೆ. ಹಿರಿಯ ನಾಗರಿಕರು, ಮಹಿಳೆಯರು ಮತ್ತು ಅಂಗವಿಕಲರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಹಾಗೂ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಈ ನಿರ್ಧಾರ ಹೊಂದಿದೆ. ಮೇಲಿನ ಹಾಗೂ ಮಧ್ಯಮ ಬರ್ತ್‌ನಲ್ಲಿ ಪ್ರಯಾಣ ಮಾಡಲು ಈ 3 ವರ್ಗದವರು ಅನುಭವಿಸುವ ತೊಂದರೆಗಳ ನಿವಾರಣೆಗಳಿಗೆ ಇದು ಅನುಕೂಲ ಮಾಡಿಕೊಡಲಿದೆ.

ಸ್ವಯಂಚಾಲಿತ ಹಂಚಿಕೆ ತಂತ್ರವನ್ನು ಜಾರಿಗೆ ತರುವ ಮೂಲಕ ಭಾರತೀಯ ರೈಲ್ವೆ ಮೀಸಲಾತಿ ಪ್ರಕ್ರಿಯೆಯನ್ನು ಸುಗಮಗೊಳಿಸಿದೆ. ಗರ್ಭಿಣಿಯರು, 45 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಮಹಿಳಾ ಪ್ರಯಾಣಿಕರು ಮತ್ತು ವೃದ್ಧರು (60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷ ಪ್ರಯಾಣಿಕರು ಮತ್ತು 58 ವ...