ಭಾರತ, ಏಪ್ರಿಲ್ 16 -- ರೈಲಿಗೂ ಬಂತು ಎಟಿಎಂ: ಭಾರತದ ಮೊದಲ ಟ್ರೇನ್ ಎಟಿಎಂ ಅನ್ನು ಮಹಾರಾಷ್ಟ್ರದ ಮನ್‌ಮಾಡ್‌ - ಸಿಎಸ್‌ಟಿ ಪಂಚವಟಿ ಎಕ್ಸ್‌ಪ್ರೆಸ್‌ನಲ್ಲಿ ಅಳವಡಿಸಲಾಗಿದೆ. ಏಪ್ರಿಲ್ 10 ರಂದು ಇದರ ಪ್ರಾಯೋಗಿಕ ಅಳವಡಿಕೆ ನಡೆದಿದ್ದು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾಗಳಲ್ಲೂ ಇದರ ವಿಡಿಯೋ ವೈರಲ್ ಆಗಿದ್ದು, ಪ್ರಯಾಣಿಕರು ನಗದು ಹಣಕ್ಕಾಗಿ ಇನ್ನು ರೈಲಿನಿಂದ ಕೆಳಗೆ ಇಳಿಯಬೇಕಾಗಿಲ್ಲ ಎಂಬ ಮಾತು ಕೇಳಿಬಂದಿದೆ.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಇದರ ವಿಡಿಯೋ ಶೇರ್ ಮಾಡಿದ್ದು, ರೈಲಿನಲ್ಲಿ ಮೊದಲ ಬಾರಿಗೆ ಎಟಿಎಂ ಸ್ಥಾಪನೆ ವಿಚಾರ ಬಹಿರಂಗಪಡಿಸಿದ್ದಾರೆ. ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಈ ವಿಚಾರ ಹಂಚಿಕೊಂಡಿರುವ ಅವರು, ಪ್ರಯಾಣಿಕರ ಅನುಕೂಲಕ್ಕಾಗಿ ನವೋನ್ವೇಷಣೆ, ಹೊಸ ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿರುವ ವಿಚಾರ ಹೇಳುತ್ತಿರುತ್ತಾರೆ.

ಎಟಿಎಂ ಅನ್ನು ರೈಲಿನಲ್ಲಿ ಅಳವಡಿಸುವಾಗ ಅದು ರೈಲಿನ ಚಲನೆಯ ಕಂಪನಕ್ಕೆ ಅಲುಗಾಡದಂತೆ ಪ್ರತ್ಯೇಕ ಬೋಲ್ಟ್‌ಗಳನ್ನು ಹಾಕಿ ...