ಭಾರತ, ಏಪ್ರಿಲ್ 3 -- Mahaan Movie: ಸಾಲು ಸಾಲು ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿರುವ, ಒಂದಕ್ಕಿಂತ ಒಂದು ವಿಭಿನ್ನ ಎನಿಸುವ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿರುವ ನಟ ವಿಜಯ್‌ ರಾಘವೇಂದ್ರ, ಇದೀಗ ಇನ್ನೊಂದು ಹೊಸ ಕಥೆಯ ಮೂಲಕ ಆಗಮಿಸುತ್ತಿದ್ದಾರೆ. ಆ ಚಿತ್ರಕ್ಕೆ ಮಹಾನ್‌ ಎಂಬ ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗಷ್ಟೇ ಇದೇ ʻಮಹಾನ್‌ʼ ಚಿತ್ರದ ಶೀರ್ಷಿಕೆಯನ್ನು ನಟ ಶಿವರಾಜ್‌ಕುಮಾರ್‌ ಅನಾವರಣ ಮಾಡಿ ಶುಭಕೋರಿದರು. ಇನ್ನು ಈ ಸಿನಿಮಾದ ನಿರ್ದೇಶನದ ಉಸ್ತುವಾರಿ ಪಿಸಿ ಶೇಖರ್‌ ಅವರದ್ದು.

ಈಗಾಗಲೇ ಕನ್ನಡದಲ್ಲಿ ಸಾಕಷ್ಟು ತರಹೇವಾರಿ ಸಿನಿಮಾಗಳನ್ನು ನೀಡಿರುವ ಪಿ.ಸಿ.ಶೇಖರ್, ಇದೀಗ ಅಲೆಯನ್ಸ್ ಯೂನಿವರ್ಸಿಟಿ ವಿದ್ಯಾ ಸಂಸ್ಥೆಯ ಸಹಯೋಗದಲ್ಲಿ ಆಕಾಶ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಪ್ರಕಾಶ್ ನಿರ್ಮಿಸುತ್ತಿರುವ ನೂತನ ಚಿತ್ರವೇ ಈ ʻಮಹಾನ್‌ʼ. ಶೀರ್ಷಿಕೆ ಅನಾವರಣ ಮಾಡಿ ಮೆಚ್ಚಿದ ಶಿವಣ್ಣ, ಮಹಾನ್ ಚಿತ್ರದ ಸಣ್ಣ ಗ್ಲಿಂಪ್ಸ್ ನೋಡಿದೆ. ತುಂಬಾ ಚೆನ್ನಾಗಿದೆ. ಶೀರ್ಷಿಕೆ ಸಹ ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ. ಚಿತ್ರ ಯಶಸ್ವಿಯಾಗಲಿ ಎಂದಿದ...