ಭಾರತ, ಏಪ್ರಿಲ್ 21 -- ಇಂದಿನ ತಂತ್ರಜ್ಞಾನದ ಜಗತ್ತಿನಲ್ಲಿ ಮೆದುಳಿಗೆ ಕೆಲಸ ಕೊಡೋರು ಕಡಿಮೆ ಅಂತಲೇ ಹೇಳಬಹುದು. ಈ ಗಡಿಬಿಡಿ ಬದುಕಿನಲ್ಲಿ ನಿಮ್ಮ ಮೆದುಳಿಗೆ ಕೊಂಚ ರಿಲ್ಯಾಕ್ಸ್ ಬೇಕು ಎಂದರೆ ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳುವ ಪ್ರಯತ್ನ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಬ್ರೈನ್ ಟೀಸರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಜನರಿಗೆ ಇವು ಸಾಕಷ್ಟು ಇಷ್ಟವಾಗುತ್ತಿವೆ. ಇದರಿಂದ ಮೆದುಳಿಗೆ ಕೆಲಸದ ಜೊತೆ ಮೋಜು ಕೂಡ ಸಿಗುತ್ತದೆ.

ಇತ್ತೀಚಿಗೆ ಫೇಸ್‌ಬುಕ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ ಪ್ರಶ್ನೆಯೊಂದು ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ. ಇದರಲ್ಲಿರುವ ಪ್ರಶ್ನೆ ನೋಡಿದಾಗ ಉತ್ತರ ಹೇಳಬಹುದು ಎನ್ನಿಸಿದರೂ 10 ಸೆಕೆಂಡ್‌ನಲ್ಲಿ ಉತ್ತರ ಹೇಳೋದು ಖಂಡಿತ ಸುಲಭ ಎನ್ನಿಸುವುದಿಲ್ಲ.

ಒಬ್ಬ ರೈತನ ಹೊಲದಲ್ಲಿ 3 ಕುದುರೆಗಳು, 2 ಬಾತುಕೋಳಿ ಹಾಗೂ ಒಂದು ಹಂದಿ ಇದ್ದರೆ ಅವನ ಹೊಲದಲ್ಲಿ ಎಷ್ಟು ಕಾಲುಗಳಿವೆ ಎಂಬುದನ್ನು ನೀವು ಕಂಡುಹಿಡಿಯಬೇಕು. ನೀವು ಇದಕ್ಕೆ ಉತ್ತರ ಹೇಳೋದು ಸುಲಭ ಅಂದುಕೊಂಡರೆ ಖಂಡಿತ ಇದಕ್ಕೆ ಉತ್...