Bangalore, ಏಪ್ರಿಲ್ 8 -- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯಕ್ಕೆ ಹಾಜರಾಗದ ನಟ ದರ್ಶನ್‌ ನಡೆಗೆ ಬೆಂಗಳೂರು ಸಿಟಿ ಮತ್ತು ಸೆಷನ್ಸ್‌ ನ್ಯಾಯಾಲಯವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಮುಖ ಆರೋಪಿ ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳು ಕೋರ್ಟ್‌ಗೆ ಇಂದು ಹಾಜರಾಗಿದ್ದಾರೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಇಂದು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಬೆನ್ನು ನೋವಿನ ಕಾರಣದಿಂದ ನ್ಯಾಯಾಲಯಕ್ಕೆ ಆಗಮಿಸಿಲ್ಲ ಎಂದು ದರ್ಶನ್‌ ಪರ ವಕೀಲರು ತಿಳಿಸಿದಾಗ ನ್ಯಾಯಾಲಯವು ತೀವ್ರ ಅಸಮಾಧಾನಗೊಂಡಿದೆ.

"ಈ ಪ್ರಕರಣದಲ್ಲಿ ಎಲ್ಲರ ಹಾಜರಾಗುವುದು ಕಡ್ಡಾಯ. ಕೋರ್ಟ್‌ನಲ್ಲಿ ಕೇಸ್‌ ಇದ್ದಾಗ ತಪ್ಪದೇ ಹಾಜರಾಗಬೇಕು. ಗಣ್ಯ ವ್ಯಕ್ತಿಗಳು ಎನಿಸಿಕೊಂಡವರು ಸರಿಯಾದ ಕಾರಣವಿಲ್ದೆ ವಿನಾಯಿತಿ ಪಡೆಯಬಹುದು ಎಂದುಕೊಳ್ಳಬಾರದು. ಕೇಸ್‌ ಇದ್ದಾಗ ಆಗಮಿಸಲೇಬೇಕು" ಎಂದು ನ್ಯಾಯಾಧೀಶರು ಎಚ್ಚರಿಸಿದ್ದಾರೆ. "ನಟನಿಗೆ ತೀವ್ರ ಬೆನ್ನು ನೋವು ಇರುವ ಕಾರಣ ಬಂದಿಲ್ಲ" ಎಂದು ವಕೀಲರು ಹೇಳಿದಾಗ ಕೋರ್ಟ್‌ "ಕೇಸ್‌ ವಿಚಾರಣೆ ಇದ್ದಾಗ ಕಡ...