Bengaluru, ಫೆಬ್ರವರಿ 14 -- ಮನೆಗೆ ಬರುವ ಅತಿಥಿಗಳಿಗೆ ನೀವು ಏನಾದರೂ ವಿಶೇಷವಾದ ಖಾದ್ಯ ಮಾಡಲು ಬಯಸುವಿರಾದರೆ ಊಟಕ್ಕೆ ನಾನ್ ತಯಾರಿಸಬಹುದು. ಅದರಲ್ಲೂ ಬೆಳ್ಳುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಬೆರೆಸಿದ ನಾನ್ ತಿನ್ನಲು ಮತ್ತಷ್ಟು ರುಚಿಕರವಾಗಿರುತ್ತದೆ. ನಿಮ್ಮ ನೆಚ್ಚಿನ ತರಕಾರಿ, ಪನೀರ್ ಅಥವಾ ಚಿಕನ್ ಖಾದ್ಯದೊಂದಿಗೆ ಇದನ್ನು ಬಡಿಸಬಹುದು. ಮನೆಯಲ್ಲೇ ರೆಸ್ಟೋರೆಂಟ್ ಶೈಲಿಯ ಬೆಳ್ಳುಳ್ಳಿ ನಾನ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು: ಮೈದಾ ಹಿಟ್ಟು- 1/2 ಕಪ್, ಯೀಸ್ಟ್- 1/2 ಚಮಚ, ಮೊಸರು- 1 ಚಮಚ, ಹಾಲು- 1/3 ಕಪ್, ಸಕ್ಕರೆ- 1/2 ಚಮಚ, ಎಣ್ಣೆ- 1 ಚಮಚ, ಉಗುರು ಬೆಚ್ಚಗಿನ ನೀರು- 1/2 ಕಪ್, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ- 2 ಚಮಚ, ಕೊತ್ತಂಬರಿ ಸೊಪ್ಪು- 3 ಚಮಚ, ಬೆಣ್ಣೆ.

ತಯಾರಿಸುವ ವಿಧಾನ: ಹೋಟೆಲ್ ಶೈಲಿಯ ರುಚಿಕರವಾದ ಬೆಳ್ಳುಳ್ಳಿ ನಾನ್ ತಯಾರಿಸಲು, ಮೊದಲಿಗೆ ಒಂದು ಬಟ್ಟಲಿನಲ್ಲಿ ಒಣ ಯೀಸ್ಟ್ ಹಾಕಿ ಮತ್ತು ಅದಕ್ಕೆ ಸಕ್ಕರೆ ಬೆರೆಸಿ. 1/2 ಕಪ್ ಬೆಚ್ಚಗಿನ ನೀರನ್ನು ಬೆರ...