Bengaluru, ಏಪ್ರಿಲ್ 1 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಮಾರ್ಚ್ 31ರ ಸಂಚಿಕೆಯಲ್ಲಿ ಭಾಗ್ಯ ಮನೆಯಲ್ಲಿ ಹಬ್ಬದ ಸಂಭ್ರಮ ನಡೆಯುತ್ತಿದೆ. ಎಣ್ಣೆ ಹಚ್ಚಿ ಸ್ನಾನ ಮಾಡಿದ ಬಳಿಕ ಮನೆಯವರು ಎಲ್ಲರೂ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ನಂತರ ಹಬ್ಬದ ವಿಶೇಷ ಅಡುಗೆ ಊಟ ತಯಾರಿಸುವ ಕುರಿತು ಮಾತನಾಡಿಕೊಂಡಿದ್ದಾರೆ. ಅಷ್ಟರಲ್ಲಿ ಭಾಗ್ಯಗೆ ಫೋನ್ ಬಂದಿದೆ. ಮನೆಯ ಊಟ ಬೇಕು, ಹಬ್ಬದ ಅಡುಗೆ ಮಾಡಿ ಕಳುಹಿಸಿಕೊಡುವಿರಾ ಎಂದು ಅತ್ತ ಕಡೆಯವರು ಕೇಳಿದ್ದಾರೆ. ಅದರಲ್ಲೂ ಭರ್ಜರಿ ಆರ್ಡರ್ ಸಿಕ್ಕಿರುವುದರಿಂದ ಭಾಗ್ಯ ಖುಷಿಯಾಗಿದ್ದಾಳೆ. ಒಳ್ಳೆಯ ಊಟ ತಯಾರಿಸಿ, ಕಳುಹಿಸಿಕೊಡುವುದಾಗಿ ಅವಳು ಹೇಳಿದ್ದಾಳೆ. ನಂತರ ಮನೆಯವರ ಬಳಿ ಊಟದ ಆರ್ಡರ್ ಸಿಕ್ಕ ವಿಚಾರವನ್ನು ಹಂಚಿಕೊಂಡಿದ್ದಾಳೆ.

ಯಥಾಪ್ರಕಾರ ಭಾಗ್ಯ ಅಮ್ಮ ಸುನಂದಾ, ಮಗಳಿಗೆ ಬುದ್ದಿ ಹೇಳಿದ್ದಾರೆ, ಒಂದು ದಿನ ಊಟದ ಆರ್ಡರ್ ಸಿಕ್ಕಿತು ಎಂದು ಬೀಗಬೇಡ, ಇನ್ನು ಕೂಡ ಕಷ್ಟದ ದಿನಗಳು ಇವೆ ಎಂದು ಎಚ್ಚರಿಸಿದ್ದಾಳೆ. ಮನೆಯವರು ಎಲ್ಲರೂ ಭಾಗ್ಯಗೆ ಊಟದ ತಯಾರಿಗೆ ಸಹಾಯ ಮಾಡುವು...