Bengaluru, ಏಪ್ರಿಲ್ 9 -- RBI Monetary Policy: ಜಾಗತಿಕ ಅನಿಶ್ಚಿತತೆಗಳು ಮತ್ತು ಹವಾಮಾನ-ಸಂಬಂಧಿತ ಅಡೆತಡೆಗಳ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಏಪ್ರಿಲ್ 9 ರಂದು (ಬುಧವಾರ) ನಿರೀಕ್ಷೆಯಂತೆಯೇ ರೆಪೋ ದರವನ್ನು ಶೆಕಡ 25 ಮೂಲಾಂಶ ಕಡಿಮೆ ಮಾಡಿ ಶೇಕಡ 6ಕ್ಕೆ ಇಳಿಕೆ ಮಾಡಿದೆ. ಆರ್‌ಬಿಐನ ಆರು ಸದಸ್ಯರ ವಿತ್ತೀಯ ನೀತಿ ಸಮಿತಿ (ಎಂಪಿಸಿ) ಒಮ್ಮತದಿಂದ ತೆಗೆದುಕೊಂಡ ತೀರ್ಮಾನ ಇದು. ವಿತ್ತೀಯ ನೀತಿ ಸಮಿತಿ ಸಭೆ ಏಪ್ರಿಲ್ 7 ರಂದು ಶುರುವಾಗಿದ್ದು ಇಂದು ಕೊನೆಗೊಂಡಿದೆ. ಇದರ ತೀರ್ಮಾನ ಪ್ರಕಾರ, ಹಣದುಬ್ಬರ ಸ್ಥಿತಿ ಸ್ಥಿರವಾಗಿ ಮುಂದುವರಿಕೆ, ಬೆಳವಣಿಗೆ ದರ ಕುಸಿತದ ಮುನ್ಸೂಚನೆಗಳನ್ನು ಸಮಿತಿ ಸಭೆ ಚರ್ಚಿಸಿದ್ದು, ಅದರ ವಿವರ ಬಹಿರಂಗವಾಗಿದೆ.
ರೆಪೋ ದರವನ್ನು 25 ಮೂಲಾಂಶ ಕಡಿಮೆ ಮಾಡಿದ ಆರ್‌ಬಿಐ, ಅದನ್ನು ಶೇಕಡ 6ಕ್ಕೆ ಇಳಿಕೆಮಾಡಿದೆ. ಇದೇ ವೇಳೆ, ಸ್ಟ್ಯಾಂಡಿಂಗ್ ಡೆಪೋಸಿಟ್ ಫೆಸಿಲಿಟಿ ದರವನ್ನು ಶೇ 5.75, ಮಾರ್ಜಿನಲ್ ಸ್ಯಾಂಡಿಂಗ್ ಫೆಸಿಲಿಟಿ (ಎಂಎಸ್‌ಎಫ್) ದರವನ್ನುಮತ್ತು ಬ್ಯಾಂಕ್ ದರವನ್ನು ಶೇಕಡ 6.25ಕ್ಕೆ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.