Bangalore, ಫೆಬ್ರವರಿ 7 -- ಬೆಂಗಳೂರು: ಕಳೆದ ಎರಡು ವರ್ಷಗಳಲ್ಲಿ ರೆಪೊ ದರ ಶೇಕಡ 6.50 ಇತ್ತು. ರಿಸರ್ವ್‌ ಬ್ಯಾಂಕ್‌ ಆಫ್‌ಇಂಡಿಯಾದ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ)ಯು ಶುಕ್ರವಾರ ರೆಪೊ ದರವನ್ನು 25 ಮೂಲಾಂಶದಷ್ಟು ಕಡಿಮೆ ಮಾಡಿದೆ. ಅಂದರೆ, ರೆಪೊ ದರ ಶೇಕಡ 6.50ರಿಂದ ಶೇಕಡ 6.25ಕ್ಕೆ ಇಳಿದಿದೆ. ಸುಮಾರು ಐದು ವರ್ಷಗಳ ಬಳಿಕ ಮೊದಲ ಬಾರಿಗೆ ರೆಪೊ ದರ ಇಳಿಕೆ ಮಾಡಲಾಗಿದೆ. ಈ ರೀತಿ ರೆಪೊ ದರ ಇಳಿಕೆ ಮಾಡಿರುವುದು ಗೃಹ ಮತ್ತು ವೈಯಕ್ತಿ ಸಾಲ ಹೊಂದಿರುವ ವ್ಯಕ್ತಿಗಳಿಗೆ ಖುಷಿ ತರಬಹುದು. ಬಡ್ಡಿದರ ಇಳಿಕೆ ಕಾಣುವುದರಿಂದ ತಿಂಗಳ ಇಎಂಐ ಕಡಿಮೆಯಾಗಲಿದೆ.

ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವ ಪ್ರಯತ್ನ ಇದಾಗಿದೆ. ಹಣಕಾಸು ನೀತಿ ಸಮಿತಿಯ ಸದಸ್ಯರು ಸರ್ವಾನುಮತದ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ಖರ್ಚು ಮತ್ತು ಹೂಡಿಕೆಗೆ ಉತ್ತೇಜನ ದೊರಕಲಿದೆ. ಹಣದುಬ್ಬರ ನಿರ್ವಹಣೆ ಸಮಯದಲ್ಲಿ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಬದ್ಧತೆಯೂ ಇಲ್ಲಿ ಕಾಣಿಸುತ್ತದೆ ಎಂದು ತಜ್ಞರು ಹೇಳಿದ್ದಾರ...