Bangalore, ಮೇ 1 -- ರೆಟ್ರೋ ಸಿನಿಮಾ ವಿಮರ್ಶೆ: ಕಾಲಿವುಡ್ ಸ್ಟಾರ್ ಹೀರೋ ಸೂರ್ಯ ನಟಿಸಿದ ರೆಟ್ರೋ ಸಿನಿಮಾ ಇಂದು ಬಿಡುಗಡೆಯಾಗಿದೆ. ಆಚಾರ್ಯ, ಕಿಸಿ ಕಿ ಭಾಯ್ ಕಿಸಿ ಕಿ ಜಾನ್, ಮತ್ತು ದೇವಾ ಮುಂತಾದ ಸಿನಿಮಾಗಳ ನಂತರ ಪೂಜಾ ಹೆಗ್ಡೆ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ ಈ ಸಿನಿಮಾದಲ್ಲಿ ತನ್ನ ಪಾತ್ರಗಳಿಗೆ ಸೂರ್ಯ ಮತ್ತು ಪೂಜಾ ಹೆಗ್ಡೆ ನ್ಯಾಯ ಒದಗಿಸಿದ್ದಾರೆ. ಆದರೆ, ಸಿನಿಮಾದಲ್ಲಿ ಗಟ್ಟಿ ಕಥೆಯಿದೆಯೇ? ಕಾಡುವ ಕೌತುಕಗಳಿವೆಯೇ? ಅನಿರೀಕ್ಷಿತ ತಿರುವುಗಳಿವೆಯೇ? ಪ್ರೇಕ್ಷಕರಿಗೆ ಇಷ್ಟವಾಗುವಂತೆ ಇದೆಯೇ? ತಿಳಿಯೋಣ.

ಪರಿ ಕಣ್ಣನ್ (ಸೂರ್ಯ)ನನ್ನು ಅವನ ತಂದೆ ತಿಲಕ್ (ಜೋಜು ಜಾರ್ಜ್) ಸಾಕಿ ಬೆಳೆಸುತ್ತಾನೆ. ಆತ ಒಬ್ಬ ಕ್ರೂರ ದರೋಡೆಕೋರ. ಪರಿ ಕಣ್ಣನ್ ರುಕ್ಮಿಣಿ (ಪೂಜಾ ಹೆಗ್ಡೆ) ಯನ್ನು ಪ್ರೀತಿಸುತ್ತಾನೆ. ಪರಿ ಕಣ್ಣನ್ ಪ್ರೀತಿಗಾಗಿ ನಾನು ರೌಡಿಸಂ ಬಿಡುವುದಾಗಿ ಮಾತುಕೊಡುತ್ತಾನೆ. ಅವನ ತಂದೆ ತಿಲಕ್‌ ಸ್ವತಃ ಪರಿಕಣ್ಣನ್‌ನನ್ನು ಕೊಲ್ಲಲು ಯತ್ನಿಸಿದಾಗ ಅವನು ಮತ್ತೆ ರೌಡಿಯಾಗಬೇಕಾಗುತ್ತದ...