ಭಾರತ, ಫೆಬ್ರವರಿ 26 -- ರಕ್ತಹೀನತೆಯಿಂದ ಬಳಲುತ್ತಿದ್ದರೆ ನಿರ್ಜಲೀಕರಣ ಮತ್ತು ಆಯಾಸವು ಉಸಿರಾಟದ ತೊಂದರೆಯಿಂದ ಹಿಡಿದು ಕಾಲುಗಳು ಮತ್ತು ಕೀಲುಗಳ ಊತದವರೆಗೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ರಕ್ತಹೀನತೆಗೆ ಇತರ ಕಾರಣಗಳಿದ್ದರೂ, ಈ ಸಮಸ್ಯೆಗೆ ಪರಿಹಾರವನ್ನು ಆಹಾರದಿಂದ ಪಡೆಯಬಹುದು. ರಾಗಿ ಹಾಗೂ ಕಡಲೆಕಾಯಿಯನ್ನು ಸೇವಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಪಡೆಯಬಹುದು. ಆರೋಗ್ಯಕ್ಕೂ ಹಿತ, ಬಾಯಿಗೂ ರುಚಿ ನೀಡುವ ರಾಗಿ-ಕಡಲೆಕಾಯಿ ಲಾಡು ತಯಾರಿಸುವುದು ತುಂಬಾ ಸುಲಭ. ರುಚಿಕರ ರಾಗಿ-ಕಡಲೆಕಾಯಿ ಲಾಡು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು: ತುಪ್ಪ - ಎರಡು ಚಮಚ, ರಾಗಿ ಪುಡಿ - ಕಾಲು ಕಪ್, ಕಡಲೆಕಾಯಿ- ಅರ್ಧ ಕಪ್, ತುರಿದ ಬೆಲ್ಲ - 1/3 ಕಪ್, ನೀರು - ¼ ಕಪ್, ಏಲಕ್ಕಿ ಪುಡಿ - ಒಂದು ಚಮಚ, ಒಂದು ಚಿಟಿಕೆ ಉಪ್ಪು.

ಮಾಡುವ ವಿಧಾನ: ರಾಗಿ ಲಾಡು ಮಾಡಲು ಮೊದಲು ಒಂದು ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ ಕಡಲೆಕಾಯಿಯನ್ನು ಹುರಿಯಿರಿ. ಕಡಲೆಕಾಯಿ ಸಂಪೂರ್ಣವಾಗಿ ತಣ್ಣಗಾದ ನಂತರ...