ಭಾರತ, ಮಾರ್ಚ್ 19 -- ಕಲಬುರಗಿ: ರೀಲ್ಸ್ ಮಾಡೋ ಚಟ ನಮ್ಮ ಜನರಿಗೆ ಎಷ್ಟು ಅಂಟಿದೆ ಅಂದ್ರೆ ಹೋದ ಹೋದಲ್ಲಿ, ಕಂಡ ಕಂಡಲ್ಲಿ ರೀಲ್ಸ್ ಮಾಡ್ತಾರೆ. ಸುತ್ತಮುತ್ತ ಯಾರಿದಾರೆ, ಏನಿದೆ ಅಂತಾನೂ ನೋಡದೇ ಮೊಬೈಲ್ ಎದುರು ನೃತ್ಯ, ನಟನೆ ಅಂತ ಶುರುವಿಟ್ಕೋತಾರೆ. ಅದರಲ್ಲೂ ಕಾನ್ಸೆಪ್ಟ್‌ಗಳ ಮೇಲೆ ರೀಲ್ಸ್ ಮಾಡೋರು ಕಡಿಮೆ ಏನಿಲ್ಲ ಬಿಡಿ. ಅಂದ್ರೆ ರೀಲ್ಸ್ ಪರಿಣಾಮ ಏನೆಲ್ಲಾ ಆಗಬಹುದು ಅನ್ನೋದಕ್ಕೆ ಇಲ್ಲೊಂದು ಉತ್ತಮ ಉದಾಹರಣೆ.

ಈ ಘಟನೆ ನಡೆದಿರೋದು ಕಲಬುರಗಿಯ ಹುಮನಾಬಾದ್‌ನಲ್ಲಿ. ಇಬ್ಬರು ಯುವಕರು ರೀಲ್ಸ್ ಹುಚ್ಚಿಗೆ ಬಿದ್ದು ಈಗ ಪೊಲೀಸರ ವಶವಾಗಿದ್ದಾರೆ. ಹಾಗಾದರೆ ನಿಜಕ್ಕೂ ಅಂಥದ್ದೇನಾಗಿದೆ ಎಂಬುದನ್ನು ನೀವು ನೋಡಿ.

ಕಲಬುರಗಿ ನಗರದ ಹುಮನಾಬಾದ್ ರಿಂಗ್ ರೋಡ್‌ನಲ್ಲಿ ಯುವಕನನ್ನ ಕೊಲೆ ಮಾಡುತ್ತಿರುವ ರೀಲ್ಸ್ ವಿಡಿಯೊವೊಂದು ವೈರಲ್ ಆಗಿತ್ತು. ಓರ್ವ ಯುವಕ ಮತ್ತೋರ್ವ ಯುವಕನನ್ನ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡುವ ದೃಶ್ಯ ಆ ರೀಲ್ಸ್‌ನಲ್ಲಿತ್ತು. ರಾತೋರಾತ್ರಿ ಈ ರೀಲ್ಸ್ ವಿಡಿಯೊ ವೈರಲ್ ಆಗಿ ಅಕ್ಷರಶಃ ಕಲಬುರಗಿ ನಗರ ಪೊಲೀಸರು ಬೆಚ್ಚಿಬ...