ಭಾರತ, ಏಪ್ರಿಲ್ 16 -- ಹರಿಯಾಣ: ಹರಿಯಾಣದ ಹಿಸಾರ್ ಜಿಲ್ಲೆಯ ಪ್ರೇಮನಗರದಲ್ಲಿ ಪತ್ನಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ ಘಟನೆ ನಡೆದಿದೆ. 32 ವರ್ಷದ ರವೀನಾ ಕೆಲವು ವರ್ಷಗಳ ಹಿಂದೆ ವಿವಾಹವಾಗಿದ್ದಳು. ಅವಳು ಇನ್ಸ್‌ಟಾಗ್ರಾಮ್‌ನಲ್ಲಿ ರೀಲ್ಸ್‌ ಮಾಡಲು ಇಷ್ಟಪಡುತ್ತಿದ್ದಳು. ರವೀನಾ ಇನ್ನು ಹಲವು ಕ್ರಿಯೇಟರ್‍‌ಗಳ ಜತೆ ರೀಲ್ಸ್ ಮಾಡುತ್ತಲೇ ಇರುತ್ತಿದ್ದಳು. 32 ವರ್ಷದ ರವೀನಾಗೆ ಸಾಮಾಜಿಕ ಜಾಲತಾಣದ ಮೂಲಕವೇ ಸುರೇಶ್ ಎಂಬ ವ್ಯಕ್ತಿ ಪರಿಚಯವಾದನು. ಅವರಿಬ್ಬರೂ ಒಂದುವರೆ ವರ್ಷಗಳಿಂದ ಜತೆಯಾಗಿ ವಿಡಿಯೋಗಳನ್ನು ಮಾಡುತ್ತಾ ಬಂದಿದ್ದಾರೆ ಎನ್ನಲಾಗಿದೆ.

ರವೀನಾ ಪತಿ ಪ್ರವೀಣ್ ಮತ್ತು ಅವರ ಕುಟುಂಬ ಸದಸ್ಯರು ಸುರೇಶ್ ಅವರನ್ನು ಇಷ್ಟಪಡಲಿಲ್ಲ. ಅವನಿಂದ ದೂರವಿರಲು ಹೇಳುತ್ತಿದ್ದರು, ಆದರೆ ರವೀನಾ ಸುರೇಶ್ ಜತೆ ಆಪ್ತವಾಗಿ ನಡೆದುಕೊಳ್ಳುತ್ತಿದ್ದಳು ಅವನ ಜತೆ ಡಾನ್ಸ್‌ ಮಾಡುವುದು ಆ ವಿಡಿಯೋಗಳನ್ನು ಪೋಸ್ಟ್‌ ಮಾಡುವುದು ಮಾಡುತ್ತಲೇ ಇದ್ದಳು. ಕಳೆದ ತಿಂಗಳು 25ರಂದು ಪ್ರವೀಣ್, ರವೀನಾ ಮತ್ತು ಸುರೇಶ್ ಅವರನ್ನು ಒಂಟಿ ಮತ್ತು ಅ...