Bangalore, ಮಾರ್ಚ್ 25 -- Vinay and Rajath Reels Case: ಬಿಗ್‌ಬಾಸ್‌ ಕನ್ನಡ ಮಾಜಿ ಸ್ಪರ್ಧಿಗಳಾದ ರಜತ್‌ ಮತ್ತು ವಿನಯ್‌ ಗೌಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಕೆಲವು ನಾಟಕೀಯ ಬೆಳವಣಿಗೆಗಳು ನಡೆದಿವೆ. ಪೊಲೀಸರ ಬಂಧನದಿಂದ ಬಿಡುಗಡೆಯಾಗಿದ್ದ ಇವರಿಬ್ಬರನ್ನು ಮತ್ತೆ ಬಂಧಿಸಲಾಗಿದೆ. ‌ಪೊಲೀಸರು ಇವರಿಬ್ಬರನ್ನು ಕರೆದುಕೊಂಡು ಸ್ಥಳ ಮಹಜರು ಕೂಡ ನಡೆಸಿದ್ದಾರೆ.

ಮಾರಕಾಸ್ತ್ರ ಹಿಡಿದು ರೀಲ್ಸ್‌ ಮಾಡಿರುವ ರಜತ್‌ ಮತ್ತು ವಿನಯ್‌ ಅವರನ್ನು ಪೊಲೀಸರು ನಿನ್ನೆ ಬಂಧಿಸಿದ್ದರು. ಮಧ್ಯರಾತ್ರಿ ಇವರಿಬ್ಬರನ್ನು ಬಿಡುಗಡೆ ಮಾಡಿದ್ದರು. ಇಂದು ಇವರಿಬ್ಬರು ವಿಚಾರಣೆಗೆ ಬಂದ ಸಮಯದಲ್ಲಿ ಮತ್ತೆ ಬಂಧಿಸಿದ್ದಾರೆ. ಇದಕ್ಕೂ ಮೊದಲು ರಜತ್‌ ಅವರು ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದರು. ಜನರಿಗೆ ತಪ್ಪು ಸಂದೇಶ ನೀಡುವ ಉದ್ದೇಶದಿಂದ ಈ ರೀಲ್ಸ್‌ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

"ನಾವು ಕಲಾವಿದರಾಗಿ ಈ ರೀಲ್ಸ್‌ ಮಾಡಿದ್ದೇವೆ. ಅದನ್ನು ಜನರು ಅನುಸರಿಸಲಿ ಎಂದು ಮಾಡಿಲ್ಲ. ಇದಕ್ಕೆ ಸಂಬಂಧಪಟ್ಟ ಪ್ರಾಪರ್ಟಿ ನಿನ್...