ಭಾರತ, ಏಪ್ರಿಲ್ 30 -- ರುದ್ರ ಗರುಡ ಪುರಾಣ ಒಟಿಟಿ ಬಿಡುಗಡೆ: ಒಟಿಟಿಯಲ್ಲಿ ಸದ್ಯದಲ್ಲಿಯೇ ಕನ್ನಡ ಸಿನಿಮಾವೊಂದು ಬಿಡುಗಡೆಯಾಗಲಿದೆ. ಆಪರೇಷನ್‌ ಅಲಮೇಲಮ್ಮ, ಕವಲು ದಾರಿ , ಸಾರ್ವಜನಿಕರಿಗೆ ಸುವರ್ಣಾವಕಾಶ ಮೂಲಕ ಕನ್ನಡ ಸಿನಿಮಾ ಲೋಕದಲ್ಲಿ ಭರವಸೆ ಮೂಡಿಸಿರುವ ನಟ ರಿಷಿ ನಟನೆಯ ರುದ್ರ ಗರುಡಾ ಸಿನಿಮಾವು ಈ ವರ್ಷದ ಜನವರಿ ತಿಂಗಳಿನಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಿ ನಾಲ್ಕು ತಿಂಗಳು ಕಳೆದರೂ ಇದು ಒಟಿಟಿಯಲ್ಲಿ ರಿಲೀಸ್‌ ಆಗಿಲ್ಲ. ವರದಿಗಳ ಪ್ರಕಾರ ರಿಷಿ ನಟನೆಯ ಈ ನಿಗೂಢ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ಶೀಘ್ರದಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ರುದ್ರ ಗರುಡ ಪುರಾಣವು ಮುಂದಿನ ಒಂದು ತಿಂಗಳೊಳಗೆ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ರಿಲೀಸ್‌ ಆಗಲಿದೆ ಎಂದು ವರದಿಗಳು ತಿಳಿಸಿವೆ. ಇತ್ತೀಚೆಗೆ ಅಮೇಜಾನ್‌ ಪ್ರೈಮ್‌ ವಿಡಿಯೋ ಒಟಿಟಿಯು ಕನ್ನಡ ಸಿನಿಮಾಗಳನ್ನು ಬಿಡುಗಡೆ ಮಾಡಲು ಆದ್ಯತೆ ನೀಡುತ್ತಿದೆ. ಅಂದಹಾಗೆ, ರುದ್ರ ಗರುಡ ಪುರಾಣ ಒಟಿಟ...