Bangalore, ಏಪ್ರಿಲ್ 9 -- ಆಪರೇಷನ್ ಅಲಮೇಲಮ್ಮ ಸಿನಿಮಾದ ಮೂಲಕ ಖ್ಯಾತಿ ಪಡೆದಿರುವ ಕನ್ನಡ ನಟ ರಿಷಿ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ರಿಷಿ ಹೀಗೆ ಬರೆದಿದ್ದಾರೆ. "ಈ ಫೋಟೋಗಳು ನಮ್ಮನ್ನು ಅಂತಹ ಪ್ರೀತಿಯ ಸಮಯಕ್ಕೆ ಕರೆದೊಯ್ಯುತ್ತವೆ - ನಿರೀಕ್ಷಿಸುವ ಉತ್ಸಾಹದಿಂದ, ಆ ಮೊದಲ ಒದೆತಗಳವರೆಗೆ, ನಮ್ಮ ಪುಟ್ಟ ಹುಡುಗಿಯನ್ನು ಮುದ್ದಾಡುವವರೆಗೆ" ಎಂದು ರಿಷಿ ಬರೆದಿದ್ದಾರೆ.

"ಈ ಪ್ರಯಾಣವನ್ನು (ಪ್ರೆಗ್ನೆನ್ಸಿ) ಆಯ್ಕೆ ಮಾಡುವ ಪ್ರತಿಯೊಬ್ಬ ಮಹಿಳೆಗೂ ಅಪಾರ ಗೌರವ - ಇದು ಕಠಿಣ, ಮತ್ತು ನೀವು ಅದ್ಭುತರು. ಮತ್ತು ವಿಭಿನ್ನ ಮಾರ್ಗವನ್ನು ಆರಿಸಿಕೊಳ್ಳುವವರಿಗೆ, ನಿಮ್ಮ ಪ್ರೀತಿಯೂ ಅಷ್ಟೇ ಮುಖ್ಯವಾಗಿದೆ.ನಿಮ್ಮನ್ನು ಪ್ರೀತಿಸುತ್ತೇನೆ ಸ್ವಾತಿ" ಎಂದು ಭಾವುಕರಾಗಿ ರಿಷಿ ಬರೆದಿದ್ದಾರೆ.

ಕನ್ನಡ ನಟ ರಿಷಿಯ ನಿಜವಾದ ಹೆಸರು ಮೋನಿಷ್‌ ನಾಗರಾಜ್‌. ಎಂಜಿನಿಯರಿಂಗ್‌ ಪದವೀಧರರಾದ ಇವರು ಸಿನಿರಂಗಕ್ಕೆ ಆಗಮಿಸುವ ಮೊದಲ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.

ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 2017ರಲ್ಲಿ ...