ಭಾರತ, ಮಾರ್ಚ್ 28 -- ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್ ಅವರು ಮತ್ತೆ ವೈಫಲ್ಯ ಅನುಭವಿಸಿದ ಹಿನ್ನೆಲೆ ಅತೃಪ್ತರಾದ ನಿರೂಪಕನೊಬ್ಬ ಲೈವ್ ಕಾರ್ಯಕ್ರಮದಲ್ಲೇ ಟಿವಿ ಒಡೆದು ಹಾಕಿದ್ದಾರೆ. ಮೊದಲ ಪಂದ್ಯದಲ್ಲಿ ಡಕೌಟ್ ಆಗಿದ್ದ ವಿಕೆಟ್ ಕೀಪರ್ ಬ್ಯಾಟರ್, 2ನೇ ಪಂದ್ಯದಲ್ಲಿ ಕೇವಲ 16 ರನ್ ಸಿಡಿಸಿದರು. ಎಸ್​ಆರ್​ಹೆಚ್​ ಎದುರಿನ ಪಂದ್ಯದಲ್ಲಿ ಪಂತ್ ಔಟಾದ ಬೆನ್ನಲ್ಲೇ ಹತಾಶೆ ಹೊರಹಾಕಿದ ನಿರೂಪಕ ಟಿವಿ ಒಡೆದು ಹಾಕಿದ್ದರ ಜೊತೆಗೆ ಅಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕತ್ವ ವಹಿಸಿಕೊಂಡಿರುವ ಪಂತ್ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದಾರೆ. ಪಂತ್​ರನ್ನು ಎಲ್‌ಎಸ್‌ಜಿ 27 ಕೋಟಿ ರೂ.ಗೆ ಖರೀದಿಸಿತು. ಆದರೆ ಇಲ್ಲಿಯವರೆಗೆ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಪಂತ್ ಅವರ ಕಳಪೆ ಪ್ರದರ್ಶನ ಮತ್ತೊಮ್ಮೆ ಕಂಡುಬಂದಿತು. ಈ ಕಳಪೆ ಪ್ರದರ್ಶನದ ಹಿನ್ನೆ...