ಭಾರತ, ಜುಲೈ 23 -- ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಆ್ಯಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಮತ್ತೊಂದು ಗಾಯದ ಹೊಡೆತ ತಗುಲಿದೆ. ಸರಣಿಯ 4ನೇ ಟೆಸ್ಟ್ ಪಂದ್ಯದ ಮೊದಲ ದಿನದ ಆಟದ 68ನೇ ಓವರ್‌ನಲ್ಲಿ ಕ್ರಿಸ್ ವೋಕ್ಸ್ ಬೌಲಿಂಗ್ ಮಾಡುವಾಗ ಪಂತ್ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಸಂದರ್ಭದಲ್ಲಿ ಚೆಂಡು ಬಾಟ್‌ಗೆ ತಾಗಿ ಬಲಗಾಲಿಗೆ ಬಡಿದಿದೆ. ಪರಿಣಾಮ ಅವರು ರಿಟೈರ್ ಹರ್ಟ್ ಆಗಿ ಹೊರ ನಡೆದರು.

ಈ ಘಟನೆಯ ನಂತರ ಇಂಗ್ಲೆಂಡ್ ತಂಡ ಡಿಆರ್‌ಎಸ್‌ ತೆಗೆದುಕೊಂಡರೂ ಫಲಿತಾಂಶ 'ನಾಟ್ ಔಟ್' ಎಂದು ಹೊರಬಂದಿತು. ಆದರೂ, ಚೆಂಡು ಬಡಿದ ಹೊಡೆತಕ್ಕೆ ಪಂತ್​ಗೆ ನಿಂತುಕೊಳ್ಳಲು ಕೂಡ ಸಾಧ್ಯವಾಗಲಿಲ್ಲ. ಬಲಗಾಲಿನ ಪಾದಭಾಗದಲ್ಲಿ ನೋವು ಹೆಚ್ಚಾದ ಕೂಡಲೇ ಅವರು 'ರಿಟೈರ್ ಔಟ್' ಆಗಿ ಮೈದಾನ ತೊರೆದರು. ಅವರ ಪಾದವು ಊತವೂ ಆಗಿದೆ. ಇದೀಗ ಅವರು ಮತ್ತೆ ಬ್ಯಾಟ್ ಮಾಡಲಿದ್ದಾರೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಹಿಂದಿನ (ಮೂರನೇ) ಟೆಸ್ಟ್ ಪಂದ್ಯದಲ್ಲಿ ಪಂತ್​ಗೆ ಬೆರಳಿಗೆ ಗಾಯವಾಗಿತ್ತು...