ಭಾರತ, ಮಾರ್ಚ್ 30 -- Sikandar Online Leaked: ಬಾಲಿವುಡ್‌ ನಟ ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ಆಕ್ಷನ್ ಎಂಟರ್‌ಟೈನರ್, 'ಸಿಕಂದರ್' ಸಿನಿಮಾ ಕೊನೆಗೂ ಚಿತ್ರಮಂದಿರಗಳಿಗೆ ಎಂಟ್ರಿಕೊಟ್ಟಿದೆ. ಇಂದು (ಮಾ. 30) ವಿಶ್ವದಾದ್ಯಂತ ಈ ಸಿನಿಮಾ ತೆರೆಗೆ ಬಂದಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಗುತ್ತಿರುವುದರ ನಡುವೆಯೇ, ಚಿತ್ರತಂಡಕ್ಕೆ ಆಘಾತದ ವಿಚಾರವೊಂದು ಅಪ್ಪಳಿಸಿದೆ. ಸಿಕಂದರ್‌ ಚಿತ್ರದ ಎಚ್‌ಡಿ ಪ್ರಿಂಟ್‌, ಸಿನಿಮಾ ಬಿಡುಗಡೆಗೂ ಕೆಲ ಗಂಟೆಗೂ ಮುನ್ನ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಅದರ ಲಿಂಕ್‌ ಎಲ್ಲ ಕಡೆ ಶೇರ್‌ ಆಗುತ್ತಿವೆ. ಇದರಿಂದಾಗಿ ಚಿತ್ರದ ಕಲೆಕ್ಷನ್‌ ಮೇಲೆಯೂ ನೆಗೆಟಿವ್‌ ಪರಿಣಾಮ ಬೀರುವ ಸಾಧ್ಯತೆಯಿದೆ.

ಆನ್‌ಲೈನ್‌ನಲ್ಲಿ ಸೋರಿಕೆಯಾದ ಬೆನ್ನಲ್ಲೇ, ಬಾಲಿವುಡ್‌ ಟ್ರೇಡ್‌ ವಿಶ್ಲೇಷಕ್‌ ಕೋಮಲ್‌ ಮೆಹ್ತಾ ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ. "ಸಿಕಂದರ್ ಸಿನಿಮಾ ಬಿಡುಗಡೆಗೂ ಮುನ್ನವೇ ಆನ್‌ಲೈನ್‌ನಲ್ಲಿ ಲೀಕ್‌ ಆಗಿರುವುದು ನಿಜಕ್ಕೂ ಕಳವಳಕಾರಿ...