ಭಾರತ, ಏಪ್ರಿಲ್ 21 -- ರಿಯಾಲಿಟಿ ಶೋಗಳಲ್ಲಿ ಕೆಲವೊಮ್ಮೆ ಶೋನ ನಿರ್ದೇಶಕರ ಗಿಮಿಕ್‌ಗಳು ಅತಿ ಎನಿಸಿದ್ದುಂಟು. ಸ್ಪರ್ಧಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ ಸಂದರ್ಭಗಳೂ ಇವೆ. ಪ್ರಸಾರ ಕಂಡ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ಟೀಕೆ ಟಿಪ್ಪಣಿಗಳನ್ನು ಎದುರಿಸಿದ ಪ್ರಸಂಗಗಳೂ ನಡೆದಿವೆ. ಇದೀಗ ʻಅಣ್ಣಯ್ಯ‌ʼ ಸೀರಿಯಲ್ ನಟಿ ನಿಶಾ ರವಿಕೃಷ್ಣನ್‌ ಅಂಥದ್ದೇ ಸಂದರ್ಭವೊಂದನ್ನು ಎದುರಿಸಿ ಕಸಿವಿಸಿಗೊಂಡಿದ್ದಾರೆ. ವೇದಿಕೆ ಮೇಲೆಯೇ ಎಲ್ಲರ ಸಮ್ಮುಖದಲ್ಲಿ ಮುಖಕ್ಕೆ ಹತ್ತಾರು ಬಾರಿ ಮುತ್ತಿಡಿಸಿಕೊಂಡು ಮುಜುಗರ ಅನುಭವಿಸಿದ್ದಾರೆ. ಹೀಗಿದೆ ವಿವರ.

ಕನ್ನಡ ಮತ್ತು ತೆಲುಗು ಕಿರುತೆರೆ ಕ್ಷೇತ್ರದಲ್ಲಿ ಸದ್ಯ ಬಿಜಿಯಾಗಿದ್ದಾರೆ ನಟಿ ನಿಶಾ ರವಿಕೃಷ್ಣನ್.‌ ಕನ್ನಡದಲ್ಲಿ ʻಅಣ್ಣಯ್ಯʼ ಸೀರಿಯಲ್‌ನಲ್ಲಿ ಪಾರ್ವತಿಯಾಗಿ ಕಾಣಿಸಿಕೊಂಡು, ಕನ್ನಡಿಗರ ಮನಗೆದ್ದಿರುವ ಈ ನಟಿ, ಪಕ್ಕದ ತೆಲುಗು ಕಿರುತೆರೆಯಲ್ಲಿ ʻಅಮ್ಮಾಯಿಗಾರುʼ ಸೀರಿಯಲ್‌ನಲ್ಲಿಯೂ ನಾಯಕಿಯಾಗಿದ್ದಾರೆ. ಕನ್ನಡದ ಅಣ್ಣಯ್ಯ ಇಲ್ಲಿ ಟಾಪ್‌ ಸ್ಥಾನದಲ್ಲಿ ಓಡುತ್ತಿದ್ದರೆ, ತೆಲುಗಿನಲ್ಲಿ ಅಮ್ಮಾಯಿಗಾರು ...