ಭಾರತ, ಮಾರ್ಚ್ 26 -- ಇಂಡಿಯನ್ ಪ್ರೀಮಿಯರ್ ಲೀಗ್​ನ 6ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳು ತಮ್ಮ ಮೊದಲ ಪಂದ್ಯದಲ್ಲಿ ಸೋತಿದ್ದು, ಇದೀಗ ಗೆಲುವಿನ ಖಾತೆ ತೆರೆಯಲು ಕಸರತ್ತು ನಡೆಸುತ್ತಿವೆ. ಕೆಕೆಆರ್​ ತಮ್ಮ ಮೊದಲ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಶರಣಾಗಿದ್ದರೆ, ಆರ್​ಆರ್​ 44 ರನ್​​ಗಳಿಂದ ಸೋತಿತ್ತು. ಸಂಜು ಅಲಭ್ಯತೆಯಲ್ಲಿ ರಾಜಸ್ಥಾನ್ ಮುನ್ನಡೆಸುತ್ತಿರುವ ರಿಯಾನ್ ಪರಾಗ್ ಮೈದಾನದಲ್ಲಿ ಒತ್ತಡಕ್ಕೆ ಒಳಗಾದವರಂತೆ ಕಾಣುತ್ತಿದ್ದು, ಅದರಿಂದ ಹೊರಬರುವುದು ಅಗತ್ಯ. ಶ್ರೇಯಸ್ ಅಯ್ಯರ್ ಸ್ಥಾನ ತುಂಬಿರುವ ಅಜಿಂಕ್ಯ ರಹಾನೆ ಅವರು ಐಪಿಎಲ್ ಕಳಪೆ ನಾಯಕತ್ವ ಟೀಕೆಯನ್ನು ಮೀರುವುದು ಅಗತ್ಯವಾಗಿದೆ. ಈ ಪಂದ್ಯಕ್ಕೆ ಸಂಬಂಧಿಸಿ ಪ್ರಮುಖ 10 ಅಂಶಗಳ ವಿವರ ಇಂತಿದೆ ನೋಡಿ.

ಉಭಯ ತಂಡಗಳ ಮೊದಲ ಪಂದ್ಯಗಳ ಫಲಿತಾಂಶ: ಕೋಲ್ಕತ್ತಾ ಮತ್ತು ರಾಜಸ್ಥಾನ್ ತಂಡಗಳು ತಮ್ಮ ಮೊದಲ ಪಂದ್ಯದಲ್ಲಿ ಮುಗ್ಗರಿಸಿವೆ. ಇದೀಗ ಗೆಲುವಿನ ಖಾತೆ ತೆರೆಯಲು ಕಸರತ್ತು ನಡೆಸುತ್ತಿವೆ. ಆರ್​ಸಿ...