Bengaluru, ಜುಲೈ 28 -- ಫೋಟೋ ಕ್ಲಿಕ್ಕಿಸಿದ ಬಳಿಕ ಅದನ್ನು ಎಡಿಟ್‌ ಮಾಡಲೆಂದೇ "ಎಐ ಎಡಿಟ್‌ ಜೀನಿ" ಎಂಬ ಅತ್ಯಾಧುನಿಕ ಟೆಕ್ನಾಲಜಿ ಒಳಗೊಂಡ ರಿಯಲ್‌ ಮಿ 15 ಸೀರಿಸ್‌ ಬಿಡುಗಡೆ ಮಾಡಿದ್ದು, ಫೋಟೋ ಎಡಿಟಿಂಗ್‌ಗಾಗಿ ಎಐ ಎಡಿಟರ್‌ ಇನ್‌ಬಿಲ್ಟ್‌ ಅಳವಡಿಸಿದ ಮೊದಲ ಸ್ಮಾರ್ಟ್‌ಫೋನ್‌ ಇದಾಗಿದೆ. ರಿಯಲ್‌ಮಿ ಇಂಡಿಯಾದ ಉತ್ಪನ್ನ ಕಾರ್ಯತಂತ್ರ ವ್ಯವಸ್ಥಾಪಕ ದೇವೇಂದರ್ ಸಿಂಗ್ ಮಾತನಾಡಿ, ರಿಯಲ್‌ಮಿ ಇದೀಗ 15ಪ್ರೊ 5G ಮತ್ತು ರಿಯಲ್‌ಮಿ 15 5G ಸೀರಿಸ್‌ನನ್ನು ಬಿಡುಗಡೆ ಮಾಡಿದ್ದು, 'ಎಐ ಪಾರ್ಟಿ ಫೋನ್' ಎಂದು ಈ ಫೋನ್‌ ಗುರುತಿಸಲ್ಪಡುತ್ತದೆ. ಇದರಲ್ಲಿ ಅನೇಕ ವಿಶೇಷ ಫೀಚರ್ಸ್‌ಗಳನ್ನು ನೀಡಲಾಗಿದೆ. ಪ್ರಮುಖವಾಗಿ ಫೋಟೋ ಎಡಿಟಿಂಗ್‌ಗೆ ಇನ್‌ಬಿಲ್ಟ್‌ "ಎಐ ಎಡಿಟ್ ಜೀನಿ" ಟೆಕ್ನಾಲಜಿ ಅಳವಡಿಸಲಾಗಿದೆ. ಈ ಎಐ ಎಡಿಟ್‌ ನಿಮ್ಮ ಫೋಟೋವನ್ನು ವೃತ್ತಿಪರ ಎಡಿಟರ್‌ನಷ್ಟೇ ನಿಖರವಾಗಿ ಎಡಿಟ್‌ ಮಾಡಿಕೊಡಲಿದೆ.ಇದರಿಂದ ಯಾವುದೇ ಕ್ವಾಲಿಟಿ ಕಾಂಪ್ರಮೈಸ್‌ ಆಗುವುದಿಲ್ಲ.

ವಿವಿಧ ಜೀವನಶೈಲಿಗಳನ್ನು ಅಳವಡಿಸಿಕೊಳ್ಳುವ ಯುವ ಪೀಳಿಗೆಗಾಗಿ ವಿನ್ಯಾಸಗೊಳಿಸಲಾ...