ಭಾರತ, ಏಪ್ರಿಲ್ 23 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 22ರ ಸಂಚಿಕೆಯಲ್ಲಿ ಶ್ರಾವಣಿ ಎಷ್ಟೇ ಬೇಡಿಕೊಂಡ್ರೂ ಸುಬ್ಬು ಮ್ಯಾರೇಜ್ ಸರ್ಟಿಫಿಕೇಟ್‌ಗೆ ಸಹಿ ಹಾಕುವುದಿಲ್ಲ. ದುಃಖದಲ್ಲೇ ರಿಜಿಸ್ಟ್ರರ್ ಆಫೀಸ್ ಕಡೆ ಹೊರಡುತ್ತಾಳೆ ಶ್ರಾವಣಿ. ಇತ್ತ ಲಲಿತಾದೇವಿ ಅಳಿಯನ ಬಳಿ ತಾನು ರಿಜಿಸ್ಟ್ರೇಷನ್ ಆಫೀಸ್‌ನಿಂದ ನೇರವಾಗಿ ಊರಿಗೆ ಹೊರಡ್ತೇನೆ ಅಂತ ಹೇಳ್ತಾರೆ. ಇದ್ದಕ್ಕಿದ್ದ ಹಾಗೆ ಅತ್ತೆ ಊರಿಗೆ ಹೋಗ್ತೀನಿ ಅಂತಿರೋದು ವೀರೇಂದ್ರ ಸೇರಿ ಮನೆಯವರಿಗೆ ಶಾಕ್ ನೀಡುತ್ತೆ. ವೀರೇಂದ್ರ 'ಯಾಕೆ ಅತ್ತೆ ಅವರೇ, ಇದ್ದಕ್ಕಿದ್ದ ಹಾಗೆ ಈ ನಿರ್ಧಾರ ತಗೊಂಡ್ರಿ, ನಮ್ಮಿಂದ ನಿಮಗೆ ಏನಾದ್ರೂ ತೊಂದರೆ ಆಗ್ತಿದ್ಯಾ' ಎಂದು ಪ್ರಶ್ನೆ ಮಾಡ್ತಾರೆ. ಆಗ ಲಲಿತಾದೇವಿ 'ಅಯ್ಯೋ ಹಾಗೆಲ್ಲಾ ಏನಿಲ್ಲಾ, ನಾನು ಊರಿಗೆ ಹೋಗದೇ ತುಂಬಾ ದಿನ ಆಯ್ತು. ಅಲ್ಲಿ ಸಾಕಷ್ಟು ಕೆಲಸಗಳಿವೆ. ಈಗ ನನ್ನ ಯಜಮಾನರು ವಹಿಸಿದ ಕೆಲಸ ಕೂಡ ಮುಗಿಯುತ್ತೆ, ಶ್ರಾವಣಿ ಹೆಸರಿಗೆ ಆಸ್ತಿ ಎಲ್ಲಾ ಟ್ರಾನ್ಸ್‌ಫರ್ ಆಗುತ್ತೆ. ಹಾಗಾಗಿ ನಾನು ಹೊರಟು ಬಿಡುತ್ತೇನೆ' ಎನ್ನುತ್ತಾರೆ. ಈ ನಡುವೆ...