ಭಾರತ, ಮಾರ್ಚ್ 26 -- ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತಕ್ಕೆ 58 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿತ್ತು. ಪ್ರಶಸ್ತಿ ಮೊತ್ತ ಸೇರಿ ಒಟ್ಟು ಬಹುಮಾನ 78 ಕೋಟಿ ರೂಪಾಯಿ ತಂಡದ ಪಾಲಾಯಿತು. ಇದೀಗ ಮಾಜಿ ಭಾರತ ನಾಯಕ ಸುನಿಲ್ ಗವಾಸ್ಕರ್​ ಅವರು ಟೀಮ್ ಇಂಡಿಯಾ ಹೆಡ್​ಕೋಚ್ ಗೌತಮ್ ಗಂಭೀರ್ ಅವರಿಗೆ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ. ಹಿಂದಿನ ಕೋಚ್ ರಾಹುಲ್ ದ್ರಾವಿಡ್​ಗೆ ಹೆಚ್ಚಿನ ಮೊತ್ತ ಸಿಕ್ಕಿದ್ದರೂ ಅವರು ಸಹಾಯಕ ಸಿಬ್ಬಂದಿಗೆ ಸಿಕ್ಕ ಮೊತ್ತದಷ್ಟೆ ಪಡೆದಿದ್ದರು. ಹೆಚ್ಚುವರಿ ಮೊತ್ತ ಪಡೆಯಲು ನಿರಾಕರಿಸಿದ್ದರು. ಇದೀಗ ದ್ರಾವಿಡ್​ರಂತೆ ಗಂಭೀರ್ ನಿರಾಕರಿಸುತ್ತಾರೆಯೇ ಎಂದು ಲಿಟ್ಲ್​​ ಮಾಸ್ಟರ್​ ಕೇಳಿದ್ದಾರೆ.

ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಬಾರ್ಬಡೋಸ್‌ನಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ 2024ರ ಟಿ20 ವಿಶ್ವಕಪ್ ಗೆದ್ದಿತ್ತು. ಮಹತ್ವದ ಟ್ರೋಫಿ ಗೆದ್ದ ಬಳಿಕ ಭಾರತೀಯ ಕ್ರಿಕೆಟ್ ಮಂಡ...